ಬಿಜೆಪಿ ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ನೂತನ ಜಿಲ್ಲಾ ಪದಾಧಿಕಾರಿಗಳ ಘೋಷಣೆ ಹಾಗೂ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಕ್ಷದ ಶಾಲು ಹೊದಿಸುವ ಮೂಲಕ ಸಂಘಟನೆಯ ಜವಾಬ್ದಾರಿ ಹಂಚಿಕೆ ಸಂಸದ ಬಿ ವೈ ರಾಘವೇಂದ್ರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದವರು ಭಾರತೀಯ ಜನತಾ ಪಕ್ಷ ಜಗತ್ತಿನಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ. ಹಿರಿಯರ ಅತ್ಯುತ್ತಮ ಸಂಘಟನೆ, ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳಿಂದ ಜನ ಸಾಮಾನ್ಯರ ನಂಬಿಕೆ ಸೇರಿದಂತೆ ಇನ್ನೂ ಅನೇಕ ಧೃಡ ನಿರ್ಧಾರದಿಂದ ಪಕ್ಷ ಇಂದು ಐತಿಹಾಸಿಕ ಕಾಲಘಟ್ಟಕ್ಕೆ ಬಂದು ನಿಂತಿದೆ ಎಂದರು.

ಹಿರಿಯರ ನಿರಂತರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಯುವಕರ ತಂಡವನ್ನು ವಿಶ್ವಾಸಕ್ಕೆ ಪಡೆದುಕೊಂಡು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆಗೆ ನಿರಂತರ ಶ್ರಮಿಸುವಂತೆ ಈ ಮೂಲಕ ಮುಂದಿನ ದಿನಗಳಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪಕ್ಷ ಸಂಘಟಿಸುವಂತೆ ಕರೆ ಕೊಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ಶಾಸಕರುಗಳಾದ ಶ್ರೀ ಚನ್ನಬಸಪ್ಪ ಅವರು ಹಾಗೂ ಶ್ರೀ ಧನಂಜಯ ಸರ್ಜಿ ಅವರು, ಮಾಜಿ ಶಾಸಕರಾದ ಶ್ರೀ ಅಶೋಕ್ ನಾಯಕ್ ಅವರು, ಶ್ರೀ ಅಶೋಕ್ ಅವರು ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.