ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ವಿಶೇಷ ಅಧಿಕಾರಿಯಾಗಿ ಡಾ. ಪರಮೇಶ್ವರ್ ಅವರು ನೇಮಕವಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ ಪರಮೇಶ್ವರ್ ರವರು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶ್ರೀಯುತರು ಪ್ರಸ್ತುತ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಿಜಿಸ್ಟ್ ವಿಭಾಗದ ಮುಖ್ಯಸ್ಥರಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಸುತ್ತಮುತ್ತ ಐದು ಆರು ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ರೋಗಿಗಳಿಗೆ ಉತ್ತಮ ತಪಾಸಣೆ ಮಾಡುವ ಮೂಲಕ ಸ್ಪಂದಿಸಿ ಪರಿಹಾರ ನೀಡುತ್ತಾರೆ. ಇವರು ಮಾಡಿರುವ ಹೃದಯಕ್ಕೆ ಸಂಬಂಧಪಟ್ಟ ಸಾಕಷ್ಟು ಆಪರೇಷನ್ ಗಳು ಯಶಸ್ವಿಯಾಗಿದೆ. ಸಮಾಜಮುಖಿ ಸಂಘಗಳು ಇವರಿಗೆ ಸಾಕಷ್ಟು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಶಿವಮೊಗ್ಗ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ ನಿರ್ದೇಶಕ ಡಾ ವಿರೂಪಾಕ್ಷಪ್ಪ ವೈದ್ಯಕೀಯ ಅಧೀಕ್ಷಕರಾದ ಡಾ ತಿಮ್ಮಪ್ಪ ಜಿಲ್ಲಾ ಅಧೀಕ್ಷಕರಾದ ಸಿದ್ದನಗೌಡ ಮತ್ತು ಸಂಸ್ಥೆಯ ಸಿಬ್ಬಂದಿಗಳು ಅಭಿನಂದನೆ ಕೋರಿದ್ದಾರೆ.