ಶಿವಮೊಗ್ಗದ ಗಾಜನೂರ್ ಡ್ಯಾಮ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ಸು ಡಿಕ್ಕಿ ಹೊಡೆದಿದೆ.ಮಂಗಳೂರಿಂದ ಚಳ್ಳಕೆರೆ ಗೆ ಹೋಗುವ ದುರ್ಗಾಂಬ ಬಸ್ ಶಿವಮೊಗ್ಗದ ಗಾಜನೂರು ಹತ್ತಿರ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು 2 ಜನ ಮೃತಪಟ್ಟಿದ್ದು 15 ಜನಕ್ಕೆ ಗಾಯಗಳಾಗಿವೆ.

ಅಣ್ಣಪ್ಪ ,40 ವರ್ಷ, ಬಸ್ ಕಂಡಕ್ಟರ್ ಹರ್ಷಿತ್ ಮೃತಪಟ್ಟವರು. ಮಂಜುನಾಥ್ 35 ವರ್ಷ ಮತ್ತು ಎಂಟರಿಂದ ಹತ್ತು ಮಂದಿಗೆ ಗಾಯಗಳಾಗಿವೆ.ಗಾಯಲುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಬೆಳಗಿನ ಜಾವ ಸುಮಾರು 4 ಗಂಟೆಗೆ  ದುರ್ಘಟನೆ ನಡೆದಿದೆ. ತುಂಗನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.