ಜಿಲ್ಲೆಯ ಎಲ್ಲಾ ಶುಂಠಿ ಬೆಳೆಯುವ ಪ್ರದೇಶಗಳಲ್ಲಿ ಪೈರಿಕುಲೇರಿಯಾ ಎಂಬ ಶಿಲೀಂಧ್ರದಿAದ ಎಲೆಚುಕ್ಕೆ ರೋಗವು ಹೊಸದಾಗಿ ಉಲ್ಬಣಗೊಂಡಿದ್ದು, ಶುಂಠಿ ಬೆಳೆಗಾರರು ನಿರ್ವಹಣಾ ಕ್ರಮಗಳನ್ನು ತಕ್ಷಣದಿಂದಲೇ ತೆಗೆದುಕೊಳ್ಳಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೋಗವು ಗಾಳಿಯಿಂದ ಹಾಗೂ ಮಳೆ ಹನಿಗಳ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಮತ್ತು ಒಂದು ಹೊಲದಿಂದ ಮತ್ತೊಂದೆಡೆಗೆ ಬೇಗನೆ ಹರಡಲಿದೆ. ಅತೀ ಹೆಚ್ಚಿನ ಮಳೆ ಮತ್ತು ಅಧಿಕ ತೇವಾಂಶದ ಜೊತೆಗೆ ಕಡಿಮೆ ತಾಪಮಾನ ರೋಗ ಹರಡಲು ಪೂರಕ ವಾತಾವರಣವಾಗಿದೆ.
ಈ ರೋಗದಿಂದ ಶುಂಠಿ ಬೆಳೆಗಳಲ್ಲಿ ಮೊದಲಿಗೆ ಎಲೆಗಳ ಮೇಲೆ ಕಪ್ಪು ಅಥವಾ ಹಸಿರು ಬಣ್ಣದ ಚುಕ್ಕೆಗಳು ಕಂಡುಬರಲಿದ್ದು, ಸುತ್ತಲೂ ಕಂದು ಬಣ್ಣದಿಂದ ಕೂಡಿರುತ್ತದೆ.
ಕ್ರಮೇಣವಾಗಿ ಸಸ್ಯದ ಎಲ್ಲಾ ಭಾಗಗಳಿಗೆ ಈ ಚುಕ್ಕೆಗಳು ಆವರಿಸಿ ಎಲೆಗಳು ಒಣಗಿ, ಸಸಿಗಳು ಸಾಯಲಾರಂಭಿಸುತ್ತವೆ.
ನಿರ್ವಹಣಾ ಕ್ರಮಗಳು:
ಜಿಲ್ಲೆಯಲ್ಲಿ ಶುಂಠಿ ಬೆಳೆಗಳಲ್ಲಿ ಪೈರಿಕುಲೇರಿಯಾ ಎಂಬ ಶಿಲೀಂಧ್ರದಿAದ ಎಲೆಚುಕ್ಕೆ ರೋಗವು ಹೆಚ್ಚಾಗಿ ಉಲ್ಭಣಿಸುತ್ತಿದ್ದು, ರೋಗವನ್ನು ಹತೋಟಿಗೆ ತರಲು ಶಿಲೀಂಧ್ರ‍್ರನಾಶಕಗಳಾದ ಹೆಕ್ಸಾಕೋನೋಜೋಲ್ 25 ಇಸಿ 1 ಮಿ.ಲೀ. ಅಥವಾ ಟೆಬುಕೋನೋಜೋಲ್ 25 ಇಸಿ 1 ಮಿ.ಲೀ. ಅಥವಾ ಟೆಬುಕೋನೋಜೋಲ್ + ಟ್ರೆöÊಪ್ಲಾಕ್ಸಿಸ್ಟೊçಬಿನ್ 0.5 ಮಿ.ಲೀ. ಅಥವಾ ಅಜಾಕ್ಸಿಸ್ಟೊçÃಬಿನ್ + ಡೈಪೆನ್‌ಕೋನೋಜೋಲ್ 0.5 ಮಿ.ಲೀ. ಒಂದು ಲೀಟರ್ ನೀರಿಗೆ ಬೆರೆಸಿ ಜೊತೆಗೆ ಒಂದು ಮಿ.ಲೀ. ಅಂಟು ಅಥವಾ ರಾಳವನ್ನು ಸೇರಿಸಿ ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸಬೇಕು. ಮತ್ತೆ ಹದಿನೈದು ದಿನಗಳ ಅಂತರದಲ್ಲಿ ಮೇಲೆ ತಿಳಿಸಿರುವ ಯಾವುದಾದರೊಂದು ಶಿಲೀಂಧ್ರ ನಾಶಕವನ್ನು 2 ರಿಂದ 3 ಬಾರಿ ಸಿಂಪಡಿಸಬೇಕು.
ಮೇಲೆ ತಿಳಿಸಿರುವ ವಾತಾವರಣವು ಕೆಂಪು ಕೊಳೆ ಹಾಗೂ ಹಸಿರು ಕೊಳೆ ರೋಗಗಳಿಗೂ ಸೂಕ್ತವಾಗಿದ್ದು, ಎಲೆ ಚುಕ್ಕೆ ರೋಗದ ಹತೋಟಿಗೆ ಉಪಯೋಗಿಸುವ ಶಿಲೀಂಧ್ರ ನಾಶಕದ ಜೊತೆಯಲ್ಲಿ ವಾಲಿಡಮೈಸಿನ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.
ಪೈರಿಕುಲೇರಿಯಾ ಎಲೆಚುಕ್ಕೆ ರೋಗಕ್ಕೆ ಸಂಬAಧಿಸಿದAತೆ ಹೆಚ್ಚಿನ ಮಾಹಿತಿಗಾಗಿ ಇರುವಕ್ಕಿಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ