ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಸೂಡಾ ಕಛೇರಿಯಲ್ಲಿ ಇತ್ತೀಚೆಗೆ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪಡೆದ ನಾಜೀಮಾ ಅವರನ್ನು ಸನ್ಮಾನಿಸಿ, ಮಾತನಾಡಿ ಪ್ರಶಸ್ತಿಗಳು ಲಭಿಸುವುದರಿಂದ ಮತ್ತಷ್ಟು ಕೆಲಸ ಮಾಡಬೇಕು ಎಂಬ ಭಾವನೆಗಳು ಬೆಳೆಯುತ್ತದೆ.

ಸಮಾಜದಲ್ಲಿ ಉನ್ನತ ಸ್ಥಾನಗಳು ಕೂಡ ದೊರೆಯಲು ಕಾರಣವಾಗುತ್ತವೆ. ಸೇವೆಯ ಹೆಜ್ಜೆ ಗುರುತಿಸಲು ಕೂಡ ಕಾರಣವಾಗುತ್ತದೆ. ಸತತ ಪರಿಶ್ರಮ, ಉತ್ತಮ ಸೇವೆ ಮಾಡುವುದರಿಂದ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಪ್ರಶಸ್ತಿ ಪಡೆದವರು ಮತ್ತಷ್ಟು ಉತ್ತಮ ಸೇವೆ ಮಾಡಲಿ ಎಂದರು.


ಪ್ರಶಸ್ತಿ ಸ್ವೀಕರಿಸಿದ ಕಾಂಗ್ರೆಸ್ ಮುಖಂಡೆ ನಾಜೀಮಾ ಅವರು, ತಮ್ಮನ್ನು ಅಭಿನಂದಿಸಿದ್ದಕ್ಕೆ ಕೃತಜ್ಞತೆ ಅರ್ಪಿಸಿ ಮತ್ತಷ್ಟು ಕೆಲಸ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೌಗಂಧಿಕ ರಘುನಾಥ್, ಸಮೀನಾ ಕೌಸರ್, ರಜಿಯಾ, ಫೌಜಿಯಾ, ರೇಖಾ, ಮಂಜುಳಾ, ಜಯಂತಿ, ಪುಷ್ಪ, ಲಕ್ಷ್ಮೀ ಮುಂತಾದವರಿದ್ದರು.