ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ರಂಗಪ್ಪ ವೃತ್ತ ಮತ್ತು ಸಿ.ಎನ್ ರಸ್ತೆಯ ಬೀದಿ ಬದಿ ವ್ಯಾಪಾರಸ್ಥರನ್ನು ಭೇಟಿ ಮಾಡಿದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ವ್ಯಾಪಾರಸ್ಥರ ಸಮಸ್ಯೆಗಳ ಕೇಳಿದರು. ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳ ಬಗ್ಗೆ ಮಾಹಿತಿಗಳ ನೀಡಿದರು. ಗುರುತಿನ ಚೀಟಿಯಲ್ಲಿ ಇರುವ ಸದಸ್ಯರೇ ವ್ಯಾಪಾರದ ಸ್ಥಳದಲ್ಲಿ ಇರಬೇಕು. ನಗರಸಭೆ ನೀಡಿದ ವ್ಯಾಪಾರ ಮಾಡುವ ಜಾಗದ ಅಳತೆ ಮೀರಬಾರದು. ಸಾರ್ವಜನಿಕ ಓಡಾಟಕ್ಕೆ ತೊಂದರೆ ಆಗುವಂತೆ ಫುಟ್ ಪಾತ್ ಆಕ್ರಮಿಸಬೇಡಿ, ಈಗ ಸಿಟಿಯಲ್ಲಿ ಮೊದಲಿನಂತೆ ಇಲ್ಲ, ವ್ಯಾಪಾರಸ್ಥರು ಸಾಮಾಗ್ರಿಗಳ ಕರಿದಿಸಲು ನಡೆದುಕೊಂಡು ಬರುತ್ತಿದ್ದರು. ನಂತರ ಸೈಕಲ್ ತದನಂತರ ಮೋಟಾರ್ ಬೈಕ್ ಈಗ ಕಾರಿನಲ್ಲಿ ಬರುವಂತೆ ಅಗಿದೆ ಹಳೆಯ ರಸ್ತೆಗಳು ಅಷ್ಟೇ ಇದೆ ಅದರೆ ಜನದಟ್ಟಣೆ ಜಾಸ್ತಿ ಯಾಗಿದೆ. ನಗರ ಸ್ಮಾರ್ಟ್ ಅಗುತ್ತ ಹೋಗುತ್ತಿದೆ ಎಂದರು. ನಿಮ್ಮ ವ್ಯಾಪಾರದ ಸ್ಥಳವನ್ನು ಸ್ವಚ್ಛತೆಯಿಂದ ಇಡಬೇಕು, ನಗರವನ್ನು ಹಸರಿಕರಣಕ್ಕೆ ಸಹಕರಿಸಿ ಬೀದಿ ಬದಿ ಗುರುತಿನ ಚೀಟಿ ನಗರಸಭೆಯಿಂದ ಉಚಿತವಾಗಿ ಮಾಡಿಕೊಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಭ್ರಷ್ಟಾಚಾರ ನಿರ್ಮೂಲನೆಗೆ ಎಲ್ಲಾರೂ ಸಹಕರಿಸಿ ಎಂದು ವ್ಯಾಪಾರಸ್ಥರಲ್ಲಿ ನನ್ನ ವಿನಂತಿ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153