ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಸಂಘವನ್ನು ಬಲಪಡಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಂಯೋಜಿತ ಸಂಘ-ಸಂಸ್ಥೆಯಾದ ಶಿವಮೊಗ್ಗ ಐಟಿ ಅಸೋಸಿಯೇಷನ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಡ್ವಾನ್ಸ್ಡ್‌ ಸ್ಕೀಲ್ ಅಕಾಡೆಮಿಯು ಉತ್ತಮವಾಗಿ ನಡೆಯುತ್ತಿದ್ದು, ಬಾಷ್ ಕಂಪನಿಯೊಂದಿಗೆ ತರಬೇತಿಗಳು ನಡೆಯುತ್ತಿವೆ.

ಶಿವಮೊಗ್ಗ ಐಟಿ ಹಬ್ ಆಗಿ ನಿರ್ಮಾಣ ಮಾಡುವಲ್ಲಿಯೂ ಐಟಿ ಅಸೋಸಿಯೇಷನ್ ಸಹಕಾರವು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಇ-ವೇಸ್ಟ್ ಮ್ಯಾನೇಜ್‌ಮೆಂಟ್ ಅತ್ಯಂತ ಮುಖ್ಯವಾಗಿದ್ದು, ಶಿವಮೊಗ್ಗ ಐಟಿ ಅಸೋಸಿಯೇಷನ್ ಜಿಲ್ಲೆಯಲ್ಲಿ ಇ-ವೇಸ್ಟ್ ನಿರ್ವಹಣೆ ಮಾಡುವ ಬಗ್ಗೆ ಹೆಚ್ಚಿನ ಸಹಕಾರ ನೀಡಬೇಕು. ಪೂರಕವಾಗಿ ಇ-ವೇಸ್ಟ್ ಕುರಿತಾದ ಯೋಜನೆ ರೂಪಿಸುವುದು, ಇ-ವೇಸ್ಟ್ ಸಂಗ್ರಹಿಸುವುದು, ವಿಲೇವಾರಿ ಮಾಡುವಲ್ಲಿ ಹೆಚ್ಚಿನ ಸಹಕಾರ ಮಾಡಬೇಕು ಎಂದರು.


ಶಿವಮೊಗ್ಗ ಐಟಿ ಅಸೋಸಿಯೇಷನ್‌ನ ನೂತನ ಆಡಳಿತ ಮಂಡಳಿಯು ಸದಸ್ಯತ್ವ ವಿಭಾಗ, ಕ್ರೀಡಾ ವಿಭಾಗ, ಸಾಂಸ್ಕೃತಿಕ ವಿಭಾಗ ಹಾಗೂ ಪ್ರವಾಸ ವಿಭಾಗಗಳನ್ನು ರಚಿಸಿ ಸಮಿತಿ ಮಾಡಿರುವುದು ಶ್ಲಾಘನೀಯ. ಇದರಿಂದ ಸಂಘದ ಸಮಗ್ರ ಬೆಳವಣಿಗೆಗೆ ನೆರವಾಗಲಿದೆ ಎಂದು
ನೂತನ ಅಧ್ಯಕ್ಷ ಆನಂದ್ ಆರ್, ಕಾರ್ಯದರ್ಶಿ ಮಂಜುನಾಥ್ ಡಿ ಎಸ್, ಖಜಾಂಚಿ ಮೋಹನ್ ಕುಮಾರ್ ಎಸ್ ಅವರನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದಿಸಲಾಯಿತು.


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ, ಶಿವಮೊಗ್ಗ ಐಟಿ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ವಿನೋದ್ ಕುಮಾರ್ , ಮಾಜಿ ಅಧ್ಯಕ್ಷ ಮೋಹನ್ ಎಚ್.ಎಸ್., ಶಿವಮೊಗ್ಗ ಐಟಿ ಅಸೋಸಿಯೇಷನ್ ಉಪಾಧ್ಯಕ್ಷ ಪುರುಷೋತ್ತಮ ಎಚ್.ಕೆ., ಜಂಟಿ ಕಾರ್ಯದರ್ಶಿ ವಿಶ್ವನಾಥ್ ಎಚ್., ನಿರ್ದೇಶಕರಾದ ಅನುಷ್ ಗೌಡ ಕೆ.ಆರ್., ಮಹೇಶ್ ಎಸ್., ನವೀನ್.ಆರ್., ನಾಗರಾಜ್.ಎಂ., ವಾಗೇಶ್.ಪಿ., ವಿಶ್ವಾಸ್.ವೈ ಮತ್ತಿತರರು ಇದ್ದರು.