ಕಳೆದು ಹೋದ 110 ಮೊಬೈಲ್ ಗಳನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಂಡ ಯಶಸ್ವಿಯಾಗಿದೆ.CEIR ಪೋರ್ಟಲ್ ಬಳಸಿ ಕಳೆದು ಹೋದ ಮೊಬೈಲ್ ಫೋನ್ ಗಳನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ಪೋರ್ಟಲ್ ಗಳಲ್ಲಿ 1 ಸಾವಿರ ಮೊಬೈಲ್ ಕಳವು ಪ್ರಕರಣ ಪೋರ್ಟಲ್ ನಲ್ಲಿ ದಾಖಲಾಗಿದ್ದು ಅದರಲ್ಲಿ 110 ಮೊಬೈಲ್ ಗಳನ್ನ ಇಲಾಖೆ ಹುಡುಕಿ ಕೊಟ್ಟಿದ್ದಾರೆ.
ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಇವರ ಮಾರ್ಗದಲ್ಲಿ ಸೆನ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ, ಪಿಐ ಮಂಜುನಾಥ್ ಮತ್ತು ಸಿಬ್ಬಂದಿಗಳನ್ನ ಒಳಗೊಂಡ ತಂಡವನ್ನ ರಚಿಸಲಾಗಿತ್ತು.
ಕಳೆದ ಮೂರು ತಿಂಗಳಲ್ಲಿ 16,35,000/- ಒಟ್ಟು 110 ಮೊಬೈಲ್ ಗಳನ್ನ ಪತ್ತೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳೆದು ಹೋದರೆ ಠಾಣೆಗೆ ಭೇಟಿ ನೀಡದೆ ಸ್ವತಹ ತಾವೇ ಕೆಎಸ್ಪಿ ಅಪ್ಲಿಕೇಶನ್ ನ ಈ ಲಾಸ್ಟ್ ಆಪ್ ಮೂಲಕ ದೂರು ದಾಖಲಿಸಿ ಸ್ವೀಕೃತಿಯನ್ನು ಪಡೆದು https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ block stolen/Lost Mobile ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಫಾರಂನಲ್ಲಿ ಕಳೆದು ಹೋದ ಮೊಬೈಲ್ ಫೋನಿನ IMEI ನಂಬರ್ ಮೊಬೈಲ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮೂಲಕ ದೂರನ್ನು ದಾಖಲಿಸಬಹುದಾಗಿದೆ.