ಲಯನ್ ಜಿಲ್ಲಾ ಗೌರವಾನ್ವಿತ ರಾಜ್ಯಪಾಲರಾಗಿ ರುವ ನೀಲಕಂಠ ಎಂ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಗುಂಬೆ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ ಜನರಲ್ಲಿ ಕೋರೋನ ಸೋಂಕು ಜಾಗೃತಿ ಮೂಡಿಸುವ ಸಲುವಾಗಿ ಸಾವಿರ ಮಾಸ್ಕ್ ವಿತರಣಾ ಕಾರ್ಯಕ್ರಮಕ್ಕೆ
ಇಂದು ಚಾಲನೆ ನೀಡಲಾಯಿತು
ಆಗುಂಬೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಲು ತೆರಳಿದ್ದ ಮನೆಗಳಲ್ಲಿ ಮಾಸ್ಕ್ ಹಾಕದೆ ಹೊರಬಂದವರಿಗೆ ಮಾಸ್ಕ್ ನೀಡಲಾಯಿತು
ದಾನಿಗಳ ನೆರವಿನಿಂದ ಆಗುಂಬೆ ಪ್ರದೇಶದಲ್ಲಿ ಲಾಕ್ಡೌನ್ ಸಂಕಷ್ಟಕ್ಕೆ ಒಳಗಾಗಿರುವ ಒಬ್ಬಂಟಿಯಾಗಿ ಬದುಕುವ ಹಿರಿಯ ಜೀವಿಗಳ ಮನೆಗಳಿಗೆ ತೆರಳಿ 35 ಅಗತ್ಯವಸ್ತುಗಳ ಕಿಟ್ ನೀಡಿ `ನಿಮ್ಮೊಂದಿಗೆ ನಾವಿದ್ದೇವೆ’ ಲಯನ್ಸ್
ತುರ್ತು ಸಹಾಯವಾಣಿ ಆರಂಭಿಸಿರುವ ಬಗ್ಗೆ ಮಾಹಿತಿಯನ್ನು ನೀಡಲಾಯಿತು
ಲಯನ್ಸ್ ಕ್ಲಬ್ ಅಧ್ಯಕ್ಷ ರಾದ ಸುಧೀಂದ್ರ ಮಲ್ಯ, ಕಾರ್ಯದರ್ಶಿ ಅರುಣ್ ಗುಡ್ಡೆಕೇರಿ, ಆಗುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಆಚಾರ್ ಸದಸ್ಯರಾದ ಜಗದೀಶ್ ಮಳಲಿ ವಿಜೇಂದ್ರ (ಕಂದಾಯ ಇಲಾಖೆ) ಲಯನ್ಸ್ ಕ್ಲಬ್ ಪ್ರಮುಖರಾದ , ಶಶಿಭೂಷಣ ಬಾಯರ್, ಪ್ರಕಾಶ್ ಆಗುಂಬೆ, ವಿದ್ಯಾರ್ಥ ನಾಲೂರು ಅಣ್ಣು ಪೂಜಾರಿ, ರಾಘವೇಂದ್ರ, , ಶ್ರೀಕಾಂತ್ ಮತ್ತು ಆಗುಂಬೆ ಭಾಗದ ಕೊರೋನಾ ವಾರಿಯರ್ಸ್ ಭಾಗವಹಿಸಿದ್ದರು.