ಶಿವಮೊಗ್ಗ ಅಂಚೆ ವಿಭಾಗದ ತ್ರೆöÊಮಾಸಿಕ ‘ಡಾಕ್ ಅದಾಲತ್’ ಕಾರ್ಯಕ್ರಮವನ್ನು ದಿ: 08-08-2025 ರ ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ಅಂಚೆ ವಿಭಾಗ, ಕೋಟೆ ರಸ್ತೆ, ಶಿವಮೊಗ್ಗ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಅಂಚೆ ಇಲಾಖೆಯ ಕುರಿತು ಯಾವುದೇ ರೀತಿಯ ಕುಂದು ಕೊರತೆಗಳು ಅಥವಾ ಸಲಹೆಗಳು ಇದ್ದಲ್ಲಿ ಈ ವಿಳಾಸಕ್ಕೆ ಆ. 07 ರ ಒಳಗೆ ಕಳುಹಿಸಿಕೊಡಬೇಕೆಂದು ಹಾಗೂ ಡಾಕ್ ಅದಾಲತ್‌ನಲ್ಲಿ ಭಾಗವಹಿಸಬೇಕೆಂದು ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಜಿ.ರವರು ತಿಳಿಸಿದ್ದಾರೆ.