ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ(FPA) ಶಿವಮೊಗ್ಗ ಬ್ರಾಂಚ್ ಸಹಯೋಗದಲ್ಲಿ ವಿಶ್ವ ಸ್ತನ್ಯ ಪಾನ ದಿನ ವನ್ನು ಗುರುಪುರ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಸ್ ಶಿವಮೊಗ್ಗ ಸೆಂಟ್ರಲಿನ ಅಧ್ಯಕ್ಷರಾದ ಬಸವರಾಜ್ ಬಿ ಮತ್ತು ಕಾರ್ಯದರ್ಶಿ ಜಯಶೀಲ ಶೆಟ್ಟಿ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಇಂಡಿಯಾ (FPA) ನ ಸತೀಶ್ , ಸುಲೋಚನಾ , ಮತ್ತು ರೋಟರಿ ಸದಸ್ಯರು ವಲಯ ಸೇನಾನಿ ಕಿರಣ್ ಕುಮಾರ್ ಜಿ, ಫಾಸ್ಟ್ ಎಜಿ ರವಿ ಕೊಟೊಜಿ ರೊಟೇರಿಯನ್ ಧರ್ಮೇಂದ್ರ ಸಿಂಗ್, ಆನ್ಸ್ ಪ್ರೆಸಿಡೆಂಟ್ ರಾಜೇಶ್ ಶ್ರೀ ಬಸವರಾಜ್, ಕಾರ್ಯದರ್ಶಿ ಮಥುರಾ ಧನಂಜಯ್, ಅಂಗನವಾಡಿ ಕಾರ್ಯಕರ್ತರು ಮತ್ತು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಇಂಡಿಯಾದ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಅಧ್ಯಕ್ಷರಾದ ಬಸವರಾಜ್ ಬಿ ಮಾತನಾಡಿ ರೋಟರಿ ಸಂಸ್ಥೆಯು ಫಲಾಪೇಕ್ಷೆ ಇಲ್ಲದ ಸಂಸ್ಥೆಯಾಗಿದ್ದು ಇದು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದು ಆರೋಗ್ಯ, ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆಗಳ ಬಗ್ಗೆ ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುತ್ತಿದ್ದು ಈ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

FPA ನ ಸುಲೋಚನ ಅವರು ಮಾತನಾಡಿ ಗರ್ಭಿಣಿ ಸ್ತ್ರೀ ಮತ್ತು ಮಗುವಿನ ಸಂರಕ್ಷಣೆ, ಆರೈಕೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಕಾಯಿದೆ ಹಾಗೂ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಗರ್ಭಿಣಿ ಸ್ತ್ರೀಯರಿಗೆ ಮಾಹಿತಿ ನೀಡಿದರು. ನಂತರ ರೋಟರಿ ಕ್ಲಬ್ ವತಿಯಿಂದ ಎಲ್ಲಾ ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕಾಂಶದ ಕಿಟ್ ಗಳನ್ನ ವಿತರಿಸಲಾಯಿತು.