ಮಂತ್ರಾಲಯದಲ್ಲಿ ‘ಪರಿಮಳ ತೀರ್ಥಂ’ ಪುಷ್ಕರಣಿ ಉದ್ಘಾಟನೆ – ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಗಳ 4 ಕೋಟಿಗಳ ಮಹಾದಾನ
ಮಂತ್ರಾಲಯದ ಪವಿತ್ರ ಭೂಮಿಯಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ, ಭಕ್ತರು ಹಾರೈಸಿದ್ದ ಮಹತ್ವದ ಯೋಜನೆ ಸಾಕಾರಗೊಂಡಿದೆ. ಇಲ್ಲಿಗೆ ತೀರ್ಥಸ್ನಾನಕ್ಕಾಗಿ ಅಗತ್ಯವಾಗಿದ್ದ ‘ಪರಿಮಳ ತೀರ್ಥಂ’ ಪುಷ್ಕರಣಿ ಇಲ್ಲದ ಕೊರತೆಯನ್ನು ನಿವಾರಿಸುವಂತೆ, ಅಲಂಕೃತವಾಗಿ, ಸೌಕರ್ಯ ಸಮೇತ ನಿರ್ಮಿಸಲ್ಪಟ್ಟ ಅದ್ಭುತ ಪುಷ್ಕರಣಿಯನ್ನು MRG ಗ್ರೂಪ್ ನ ಮುಖ್ಯಸ್ಥರಾದ ಡಾ ಪ್ರಕಾಶ್ ಶೆಟ್ಟಿ ದಂಪತಿ ಉದ್ಘಾಟಿಸಿದರು.
ಈ ಮಹತ್ತಾದ ಸೇವೆಯನ್ನು, ಮಂತ್ರಾಲಯದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರೊಂದಿಗೆ, ಡಾ. ಕೆ. ಪ್ರಕಾಶ್ ಶೆಟ್ಟಿ ಹಾಗೂ ಅವರ ಪತ್ನಿ ಅಶಾ ಪ್ರಕಾಶ್ ಶೆಟ್ಟಿ ಅವರು ತಮ್ಮ ಹೃದಯಪೂರ್ವಕ ದೇಣಿಗೆಯಿಂದ ನೆರವೇರಿಸಿದ್ದಾರೆ.
ಸುಮಾರು 4 ಕೋಟಿಗಳ ವೆಚ್ಚದಲ್ಲಿ ರೂಪುಗೊಂಡಿರುವ ಈ ಯೋಜನೆ, ಭಕ್ತರ ಆತ್ಮಶಾಂತಿ ಮತ್ತು ಸೌಕರ್ಯಕ್ಕಾಗಿ ನಿರ್ಮಿಸಲ್ಪಟ್ಟ ಒಂದು ಅನನ್ಯ ಕಾಣಿಕೆ.ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರ ಸಾನ್ನಿಧ್ಯದಲ್ಲಿ, ಡಾ. ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳು ಸ್ವತಃ ಉದ್ಘಾಟನೆ ನೆರವೇರಿಸಿ, ಭಕ್ತ ಸಮುದಾಯಕ್ಕೆ ಈ ಮಹಾನ್ ಕಾಣಿಕೆಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಂತ್ರಾಲಯದ ಪವಿತ್ರ ವಾತಾವರಣಕ್ಕೆ ಹೊಸ ಶೋಭೆ ನೀಡುವ ಈ ‘ಪರಿಮಳ ತೀರ್ಥಂ’ ಪುಷ್ಕರಣಿ, ಧರ್ಮ, ಸೇವೆ ಮತ್ತು ದಾನದ ಮೌಲ್ಯಗಳನ್ನು ಜೀವಂತವಾಗಿ ತೋರಿಸುವ ಉದಾಹರಣೆ ಎಂದರು.
ಡಾ. ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳ ಈ ಮಹಾದಾನ, ಅವರ ಭಕ್ತಿಭಾವ ಮತ್ತು ಮಾನವೀಯತೆಯ ಜೀವಂತ ನಿದರ್ಶನವಾಗಿದ್ದು, ಮಂತ್ರಾಲಯದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ. ಈ ಸಮಯದಲ್ಲಿ ಮಠದ ಅರ್ಚಕ ವೃಂದ ಮತ್ತು ಇತರರು ಉಪಸ್ಥಿತರಿದ್ದರು.