ಶಿವಮೊಗ್ಗ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ, ಶ್ರೀ ಮಿಥುನ್ ಕುಮಾರ್ ಜಿ.ಕೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಸಂಜೆ ವಿಶೇಷ ಗಸ್ತು (Foot Patrolling) ನಡೆಸಿದ್ದು, ಶ್ರೀ ಎ ಜಿ ಕಾರಿಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು - 1, ಶಿವಮೊಗ್ಗ ಜಿಲ್ಲೆ, ಶ್ರೀ ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ – ಎ ಉಪ ವಿಭಾಗ ಹಾಗೂ ಶ್ರೀ ರವಿ ಕುಮಾರ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ, ಶ್ರೀ ಭರತ್ ಕುಮಾರ್ ಪಿಐ ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಭಾಗವಹಿಸಿದ್ದರು.
ಫುಟ್ ಪೆಟ್ರೋಲಿಂಗ್ ನ ವೇಳೆ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಹಾಗೂ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಅಂಗಡಿಗಳ ಮಾಲೀಕರುಗಳೊಂದಿಗೆ ಮಾತನಾಡಿ ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ಯಾವುದೇ ಅಪರಾಧಗಳು ಜರುಗಿದರೆ ಶೀಘ್ರವಾಗಿ ಪತ್ತೆ ಮಾಡುವ ಸಲುವಾಗಿ ಕಡ್ಡಾಯವಾಗಿ ನಿಮ್ಮ ಅಂಗಡಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಿ.ಸಿ ಟಿ.ವಿ ಕ್ಯಾಮೆರಾವು ಕೇವಲ ಅಂಗಡಿ ಮಾತ್ರವಲ್ಲದೇ ಹೊರಗೂ ಸಹಾ ಕವರೇಜ್ ಆಗುವ ರೀತಿ ಅಳವಡಿಸಬೇಕು, ಸಿ.ಸಿ ಟಿ.ವಿ ಕ್ಯಾಮೆರಾಗಳ ಫೂಟೇಜ್ ಅನ್ನು ಕನಿಷ್ಠ 01 ತಿಂಗಳ ವರೆಗೆ ಬ್ಯಾಕ್ ಅಪ್ ಇರುವ ರೀತಿ ನೋಡಿಕೊಳ್ಳಬೇಕು ಹಾಗೂ ಸಿ.ಸಿ ಟಿ.ವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಆಗ್ಗಾಗ್ಗೆ ಪರಿಶಿಲಿಸುತ್ತಿರಬೇಕು ಎಂದು ತಿಳಿವಳಿಕೆ ನೀಡಿರುತ್ತಾರೆ.
ನಂತರ ಬಸ್ ಸ್ಟಾಂಡ್ ಯಾತ್ರಿ ನಿವಾಸ್ ನ ಸಿಬ್ಬಂಧಿಗಳೊಂದಿಗೆ ಮಾತನಾಡಿ ಯಾತ್ರಿ ನಿವಾಸ್ ನಲ್ಲಿ ಬಂದು ತಂಗುವ ಸಾರ್ವಜನಿಕರ ಮಾಹಿತಿಯನ್ನು ಕಡ್ಡಾಯವಾಗಿ ರಿಜಿಸ್ಟರ್ ನಲ್ಲಿ ನೋಂದಾಯಿಸಬೇಕು, ಸಾರ್ವಜನಿಕರ ದಾಖಲಾತಿಗಳನ್ನು ಪರಿಶೀಲಿಸಿ, ಜೆರಾಕ್ಸ್ ಪ್ರತಿಗಳನ್ನು ಪಡೆಯಬೇಕು, ಹಾಗೂ ಯಾವುದೇ ಅನುಮಾನ ಬಂದಂತಹ ಪಕ್ಷದಲ್ಲಿ, ಕೂಡಲೇ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಬಂದು ತಂಗುವ ವ್ಯಕ್ತಿಗಳ ಮಾಹಿತಿಯನ್ನು ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಹಾಗೂ ನಿಮ್ಮ ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಎಂತಹದೇ ತುರ್ತು ಸಂದರ್ಭದಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಎಂದು ಮಾಹಿತಿ ನೀಡಿರುತ್ತಾರೆ.