ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದಿಂದ ಗುದ್ದಲಿ ಪೂಜೆ ಕಾರ್ಯಕ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ…

ಶಿವಮೊಗ್ಗ ನಗರದಲಿ ನಡೆದ ಮನೆ ಮನೆಗೆ ಮಾಚಿದೇವ ಕಾರ್ಯಕ್ರಮ ದಲ್ಲಿ ಶಿವಮೊಗ್ಗ ಜಿಲ್ಲೆಯ ಮಡಿವಾಳ ಸಮುದಾಯದ ಬಹುದಿನಗಳ ಕನಸಾಗಿದ್ದ ವಿದ್ಯಾರ್ಥಿ ನಿಲಯ ಸ್ಥಾಪನೆಗಾಗಿ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿತು.

ಶ್ರಾವಣ ಮಾಸದ ನಿಮಿತ್ತ ಸಮುದಾಯದ ಮಾತೆಯರಿಗೆ ಬಾಗಿನ ಸಮರ್ಪಣೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ದಾನಿಗಳಿಗೆ ಗೌರವ ಸಮರ್ಪಣೆ ಸನ್ಮಾನ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.


  • ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವ ಮಾಚಿದೇವ ಸ್ವಾಮೀಜಿ ರವರು ವಹಿಸಿದ್ದರು. ಗುದ್ದಲಿ ಪೂಜೆಯನ್ನು ಶಿವಮೊಗ್ಗ ನಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಚನ್ನಬಸಪ್ಪನವರು ನೆರವೇರಿಸಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ ರವಿಕುಮಾರ್ ರವರು ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರರು(ರಾಜ್ಯ ಸಚಿವರ ಸ್ಥಾನಮಾನ) ಡಾ ಧನಂಜಯ ಸರ್ಜಿ  ವಿಧಾನಪರಿಷತ್ ಸದಸ್ಯರು ಉಪಸ್ಥಿರಿದ್ದರು.
  • ಇದೇ ಸಮಾರಂಭದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಮಾನ್ಯ ಡಾ ಧನಂಜಯ್ ಸರ್ಜಿರವರು 5 ಲಕ್ಷ ರೂಪಾಯಿಗಳ ಅನುದಾನವನ್ನ ಘೋಷಿಸಿದರು .ಡಾ ರವಿಕುಮಾರ್ ರವರು ತಮ್ಮ ವೈಯಕ್ತಿಕ ಖಾತೆಯಿಂದ 1 ಲಕ್ಷ ರೂಪಾಯಿಗಳ ಕಟ್ಟಡ ನಿಧಿ ದೇಣಿಗೆಯನ್ನು ನೀಡಿದರು.
  • ಸಮುದಾಯ ಅನೇಕ ಬಂಧುಗಳು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವ ಭರವಸೆಯನ್ನ ನೀಡಿದರು . ಕೆಲವು ದಾನಿಗಳು ಸ್ಥಳದಲ್ಲೇ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಯನ್ನು ಘೋಷಿಸಿದರು.ಕಾರ್ಯಕ್ರಮವು ವಿಜೃಂಭಣೆಯಿಂದ ಅತ್ಯಂತ ವ್ಯವಸ್ಥಿತವಾಗಿ ನೆರವೇರಿತು.ಈ ಕಾರ್ಯಕ್ರಮಕ್ಕೆ ಆಗಮಿಸಿ ಅನುದಾನವನ್ನ ಘೋಷಿಸಿದ, ಕಟ್ಟಡ ನಿರ್ಮಾಣದ ದೇಣಿಗೆಯನ್ನು ನೀಡಿರುವ ಹಾಗೂ ಭರವಸೆಯನ್ನು ನೀಡಿರುವ, ಕಾರ್ಯಕ್ರಮಕ್ಕೆ ದೇಣಿಗೆಯನ್ನು ನೀಡಿರುವ.
  • ಜಿಲ್ಲೆಯ ಸಮುದಾಯದ ವಿವಿಧ ಸಂಘ ಸಂಸ್ಥೆಗಳ, ತಾಲೂಕು ಸಂಘಗಳ ಅಧ್ಯಕ್ಷರುಗಳಿಗೆ, ಕಾರ್ಯಕಾರಿ ಸಮಿತಿಯವರಿಗೆ, ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮಿಸಿ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ, ಪ್ರತಿಭಾ ಪುರಸ್ಕಾರವನ್ನು ಸ್ವೀಕರಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿ ವಿಶೇಷ ಮೆರಗನ್ನು ನೀಡಿದ ಸರ್ವರಿಗೂ” ಶಿವಮೊಗ್ಗ ಜಿಲ್ಲಾ ಮನಮನೆಗೆ ಮಾಚಿದೇವ ಆಚರಣಾ ಸಮಿತಿಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.