ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸೂಕ್ಷ್ಮ ಸ್ಥಳಗಳು ಹಾಗೂ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ವಾರದ ಬ್ರೀಫಿಂಗ್ ಸಭೆ ನಡೆಸಲಾಗುತ್ತಿರುತ್ತದೆ.

ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಜಯನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ವಾರದ ಬ್ರೀಫೀಂಗ್ ಸಭೆ ನಡೆಸಿ, ಅಧಿಕಾರಿ ಸಿಬ್ಬಂಧಿಗಳೊಂದಿಗೆ ಸಂವಹನ ನಡೆಸಿ ಕುಂದುಕೊರತೆಗಳನ್ನು ಆಲಿಸಿ, ನಂತರ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಶಿವಮೊಗ್ಗ ಜಿಲ್ಲೆಯಾದ್ಯಂತ ಮನೆ ಮನೆಗೆ ಪೊಲೀಸ್ ಸಕ್ರಿಯ ಪೊಲೀಸ್ ಸೇವೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು.

2) ಮನೆ ಮನೆಗೆ ಪೊಲೀಸ್ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಂದ ಯಾವುದಾದರೂ ಕುಂದು ಕೊರತೆಗಳೇನಾದರು ಬಂದಲ್ಲಿ, ಅವರುಗಳ ಕುಂದು ಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

3) ಸುರಕ್ಷತೆ ದೃಷ್ಠಿಯಿಂದ ಮನೆಗಳಿಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಲು ಸೂಚಿಸಿದರು.

4) ಅಪರಿಚಿರ ಚಟುವಟಿಕೆ / ಓಡಾಟದ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ, ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಲು ಸೂಚಿಸುವಂತೆ ಹೇಳಿದರು.

5) ಮುಂಬರುವ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಹಾಗೂ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ವಿವರಿಸಿದರು.

6) ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳ ಬಗ್ಗೆ ವಿಶೇಷವಾಗಿ ಗಮನ ನೀಡಬೇಕು, ಯಾವುದೇ ಮಾಹಿತಿಗಳು ತಿಳಿದು ಬಂದಲ್ಲಿ, ಮೇಲಾಧಿಕಾರಿಗಳಿಗೆ ಕೂಡಲೇ ಮಾಹಿತಿ ತಿಳಿಸಬೇಕು.

7) ಹೊಸ ಅಪರಾಧಿಕ ಕಾನೂನುಗಳ ಅಡಿಯಲ್ಲಿ ಆರೋಪಿಯನ್ನು ಬಂಧನಕ್ಕೆ ಒಳಪಡಿಸಲು ಕೈಗೊಳ್ಳಬೇಕಾದ ಪ್ರಕ್ರಿಯ ಬಗ್ಗೆ ಹಾಗೂ ಯಾವ ಕಾರಣಗಳಿಗಾಗಿ ಬಂಧಿಸಬಹುದು ಎಂದು ವಿವರಿಸದರು.

8) ದಸ್ತಗಿರಿ ಕ್ರಮದ ಕಾಯ್ದೆ ಮತ್ತು ಕಲಂ, ವ್ಯಕ್ತಿಗೆ ನೋಟೀಸ್ ಜಾರಿ ಮಾಡಬೇಕಾದ ಕ್ರಮ, ನೋಟೀಸ್ ನಲ್ಲಿ ಇರಬೇಕಾದ ಅಂಶಗಳ ಬಗ್ಗೆ ವಿವರಿಸಿದರು.

9) ಠಾಣಾ ವ್ಯಾಪ್ತಿಯಲ್ಲಿನ ದುರ್ನಡತೆ ವ್ಯಕ್ತಿಗಳ ಬಗ್ಗೆ ವಿಚಾರಿಸಿ, ಎಂಓಬಿ ಆಸಾಮಿಗಳು, ರೌಡಿ ಆಸಾಮಿಗಳು ಹಾಗೂ ಚರಿತ್ರ ಹಾಳೆ ಆಸಾಮಿಗಳ ಮೇಲೆ ಸೂಕ್ತ ನಿಗಾವಹಿಸುವಂತೆ ಸೂಚಿಸಿದರು.

10) ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂಧಿಗಳಿಗೆ ಐ-ಗಾಟ್ ಕರ್ಮಯೋಗಿ ಎಂಬ ಅಪ್ಲಿಕೇಶನ್ ಅನ್ನು ಬಳಕೆ ಮಾಡುವಂತೆ ಮೇಲಾಧಿಕಾರಿಗಳಿಂದ ಆದೇಶ ಬಂದಿದ್ದು, ಈ ಅಪ್ಲಿಕೇಶನ್ ನಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಜಾಬ್ ಓರಿಯಂಟೆಡ್ ಕೋರ್ಸ್ ಗಳು ಲಭ್ಯವಿದ್ದು, ಇದರಿಂದ ಉತ್ತಮ ಕೌಶಲ್ಯವನ್ನು ರೂಡಿಸಿಕೊಳ್ಳು ಹಾಗೂ ಕರ್ತವ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳು ಸಾಧ್ಯವಿರುತ್ತದೆ. ಆದ್ದರಿಂದ ಎಲ್ಲರೂ ಐ-ಗಾಟ್ ಕರ್ಮಯೋಗಿ ಅಪ್ಲಿಕೇಶನ್ ಗೆ ಲಾಗಿನ್ ಆಗಿ ನಂತರ ಸಂಬಂಧಪಟ್ಟ ಕೋರ್ಸ್ ಗಳಿಗೆ ಎನ್ ರೋಲ್ ಆಗುವುದು ಹಾಗೂ ಕೋರ್ಸ್ ಗಳು ಮುಗಿದ ನಂತರ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಶ್ರೀ ಸಂಜೀವ್ ಕುಮಾರ್ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀ ಸಿದ್ದೇಗೌಡ/ ಪಿಐ ಜಯನಗರ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.