ಶಾಂತಿ ನಮ್ಮ ಶಕ್ತಿ – ಆದರೆ ಅವಮಾನವನ್ನು ಸಹಿಸುವುದಿಲ್ಲ!

ಹಿಂದೂಗಳ ಮನಸ್ಸಿಗೆ ಅತ್ಯಂತ ಭಾವನಾತ್ಮಕವಾಗಿರುವ, ಎಲ್ಲರೂ ಶ್ರದ್ಧೆಯಿಂದ ಪೂಜಿಸಲ್ಪಡುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ, ಸ್ವತಃ ಮುಖ್ಯಮಂತ್ರಿ ಅವರ ಮೂಗಿನಡಿಯಲ್ಲಿ ಇರುವ ಸಂಸ್ಥೆ ಎಸ್ಐಟಿ ಮೂಲಕ ನಡೆಯುತ್ತಿರುವ ತನಿಖೆ ಹಿಂದೂಗಳ ಭಾವನೆಗೆ ಅಪಮಾನ ಮಾಡುತ್ತಿದ್ದು, ಇದು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ನೀಚ ರಾಜಕೀಯ ಉದ್ದೇಶದ ಭಾಗವಾಗಿದೆ.

ಧರ್ಮಸ್ಥಳವನ್ನು ಕುಕ್ಕರ್ ಬಾಂಬ್‌ನಿಂದ ಸ್ಫೋಟಿಸಲು ಯತ್ನಿಸಿದ ಪ್ರಕರಣದಲ್ಲಿ ತೋರದ ಕಾಳಜಿ, ಯಾರೋ ಒಬ್ಬ ‘ಅನಾಮಿಕ’ನ ಹೆಸರಿನಲ್ಲಿ, ಅವನ ಮುಖವನ್ನು ತೋರಿಸದೆ ನಿಮ್ಮ ಮನಸೋ ಇಚ್ಛೆಯ ತನಿಖೆ ನಡೆಸುವ ನಿಮ್ಮ ಪ್ರವೃತ್ತಿ – ಇದರ ಹಿಂದಿರುವ ನಿಜಾಂಶವನ್ನು ರಾಜ್ಯದ ಜನತೆ ಚೆನ್ನಾಗಿ ಅರಿತಿದೆ.

ಧರ್ಮಸ್ಥಳದ ಪ್ರತಿಷ್ಠೆಗೆ ಧಕ್ಕೆಯುಂಟುಮಾಡುವ ಯಾವುದೇ ಕ್ರಮವನ್ನು ಹಿಂದೂ ಸಮಾಜ ಎಂದಿಗೂ ಒಪ್ಪುವುದಿಲ್ಲ. ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರು ಶಾಂತ, ಸಮನ್ವಯಪರ ಸ್ವಭಾವದವರಾಗಿದ್ದು, ಅವರು ಸಮಾಜದಲ್ಲಿ ಮಾಡುತ್ತಿರುವ ಸಾಮರಸ್ಯದ ಕಾರ್ಯ ಹಾಗೂ ಅವರ ಮೇಲಿರುವ ಗೌರವ ಮತ್ತು ಧರ್ಮಸ್ಥಳದ ಮೇಲಿನ ನಂಬಿಕೆಯಿಂದ ಹಿಂದೂ ಸಮಾಜವು ಪ್ರತಿಕ್ರಿಯಿಸದೆ ಮೌನವಾಗಿದೆ. ಆದರೆ, ಧರ್ಮರಕ್ಷಣೆಗೆ ಅವರು ಕರೆಕೊಟ್ಟರೆ, ಹಿಂದೂ ಸಮಾಜವು ಒಂದಾಗಿ ನಿಂತು ಪ್ರತಿಕ್ರಿಯಿಸಲು ಸದಾ ಸಿದ್ಧವಿರುತ್ತದೆ.

ಹಿಂದೂ ಸಮಾಜವು ಶಾಂತಿ ಮತ್ತು ಮೌನವನ್ನು ಸದಾ ಬಯಸಿದೆ, ಏಕೆಂದರೆ ಶಾಂತಿ ದೊಡ್ಡ ಶಕ್ತಿ. ಆದರೆ ಶಾಂತಿಯ ಅರ್ಥವನ್ನು ಸಹನಶೀಲತೆ ಎಂದು ತಪ್ಪಾಗಿ ಅರ್ಥೈಸಿ ಭಾವನೆಗಳ ಮೇಲೆ ದಾಳಿ ಮಾಡಿದರೆ, ಜನರ ಸಹನೆ ಸ್ಫೋಟಿಸುವುದು ಅಸಾಧ್ಯವಲ್ಲ.

ಆದ್ದರಿಂದ, ಸರ್ಕಾರವು ತಕ್ಷಣವೇ ಈ ಅನ್ಯಾಯ ಮತ್ತು ಅಪಮಾನಕಾರಿ ಕ್ರಮವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಪರಿಣಾಮವಾಗಿ ಉಂಟಾಗುವ ಎಲ್ಲಾ ಅನಾಹುತಕ್ಕೆ ಸಂಪೂರ್ಣ ಹೊಣೆ ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ.

ಎಸ್ ಎನ್ ಚನ್ನಬಸಪ್ಪ (ಚೆನ್ನಿ)
ಶಾಸಕರು, ಶಿವಮೊಗ್ಗ ನಗರ