ಮಲೆನಾಡಿನ ಶಿವಮೊಗ್ಗದ ಹೊನ್ನಾಳಿ ರಸ್ತೆಯ ಗೋಂದಿಚಟ್ನಿ ಹಳ್ಳಿ ಜೆಸಿ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ವಿಶೇಷ ಕೆಸರುಗದ್ದೆ ಕ್ರೀಡೋತ್ಸವನು ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ಉದ್ಘಾಟಿಸಿದರು.

ಕೆಸರುಗದ್ದೆಯಲ್ಲಿ ಗ್ರಾಮೀಣ ಮತ್ತು ಜನಪದ ಕ್ರೀಡೆಗಳು. ಯುವಕ ಯುವತಿಯರು ಹಾಗೂ ಮಹಿಳೆಯರು ಮಕ್ಕಳು ಎಲ್ಲರೂ ಕೆಸರು ಗದ್ದೆಯಲ್ಲಿ ಕ್ರೀಡೆಗಳ ಮೂಲಕ ಕೆಸರು ಗದ್ದೆಯಲ್ಲಿ ಎದ್ದು ಬಿದ್ದು ಸಂಭ್ರಮಿಸಿದ್ದಾರೆ . ಸಿಟಿ ಲೈಫ್ ಬಿಟ್ಟು ಹಳ್ಳಿಗೆ ಬಂದು ಕೆಸರು ಗದ್ದೆಯಲ್ಲಿ ಸ್ಪರ್ಧಾಳುಗಳು ಎಂಜಾಯ್ ಮಾಡಿದರು. ಒತ್ತಡದ ಬದುಕಿನ ನಡುವೆ ಭಾನುವಾರ ಎಲ್ಲರೂ ರಜೆ ದಿನ ಕೆಸರು ಗದ್ದೆ ಕ್ರೀಡೆಯಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದರು.

ಸಂಪೂರ್ಣವಾಗಿ ಸಾಂಸ್ಕೃತಿಕ ಶೈಲಿಯಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿತ್ತು.ಶೃಂಗರಿಸಿದ ಎತ್ತುಗಳನ್ನು ತರಸಿ, ಗದ್ದೆಗೆ ಪಂಜಿನ ದೀಪಗಳನ್ನು ಬೆಳಗಿ ಹಾಲು ತುಪ್ಪವನ್ನು ಎಳೆಯುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭವಾಯಿತು.

ಕಾಲು ಕೆಸರಿನಲ್ಲಿ ಸಿಕ್ಕಿಕೊಂಡು ಅನೇಕರು ಪರದಾಡಿದ್ರು. ಕೆಸರಿನಲ್ಲಿ ವಾಲಿಬಾಲ್ ಹಾಗೂ ಚೆಂಡು ಎಸೆತ ಸ್ಪರ್ಧೆಗಳು ನಡೆಯಿತು. ಯುವತಿಯರು ಮತ್ತು ಮಹಿಳೆಯರು ಈ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ರು. 250ಕ್ಕೂ ಹೆಚ್ಚು ಸ್ಪರ್ಧಾಳುಗಳು ಕೆಸರು ಗದ್ದೆ ಕ್ರೀಡೆಯಲ್ಲಿ ಭಾಗವಹಿಸಿ ಖುಷಿ ಪಟ್ರು. ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ಪ್ರೇಕ್ಷಕರ ಗಮನ ಸೆಳೆದವು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಂದರೇಶ್ ಎಚ್ ಸಿ ಯೋಗೇಶ್ ಬಿಜೆಪಿ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ ಜ್ಯೋತಿಪ್ರಕಾಶ್ ಮಾಜಿ ಕಾರ್ಪೊರೇಟರ್ ವಿಶ್ವಾಸ್ ಕಿರಣ್ ಶರತ್ ಮರಿಯಪ್ಪ ಚಟ್ನಹಳ್ಳಿ ಪ್ರವೀಣ್ ಹರ್ಷ ಕಾಮತ್ ಕಾರ್ಯಕ್ರಮದ ವ್ಯವಸ್ಥಾಪಕರಾದ ಗಾರಾ ಶ್ರೀನಿವಾಸ್ ಸಂಚಾಲಕರದ ಶ್ರೀಧರ್ ಹೆಗಡೆ ಸಂಜಯ್ ಕುಮಾರ್ ಕ್ಲಬ್ ನ ಕಾರ್ಯದರ್ಶಿ ಶ್ರೀನಾಗ ಮತ್ತು ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.