ಧರ್ಮಸ್ಥಳದಲ್ಲಿ ಉತ್ಕನ ಮಾಡುವುದನ್ನು ಖಂಡಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿತು. ಅನಾಮಿಕನನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.ಗೋಪಿ ವೃತ್ತದಿಂದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಉತ್ಕನನವನ್ನು ವರದಿಯನ್ನು ನಿಲ್ಲಿಸುವಂತೆ ಅಗ್ರಹಿಸಿ ಜಿಲ್ಲಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ಡಿ ವೀರೇಂದ್ರ ಹೆಗಡೆ ಅವರ ಮೇಲೆ ನಿರಂತರ ದೋಷಾರೋಪಣ ಮಾಡುವ ಮೂಲಕ ನಿಂದಿಸಿ ವಿಕೃತ ಸಂತೋಷವನ್ನು ಅನುಭವಿಸುತ್ತಿರುವ ಸಮಾಜಘಾತಕ ಶಕ್ತಿಗಳ ಮೇಲೆ ಸರ್ಕಾರ ಮತ್ತು ನ್ಯಾಯಾಲಯವು ಕಠಿಣ ಕ್ರಮಗಳನ್ನು ಜರಗಿಸಬೇಕು. ಕೋಟ್ಯಂತರ ಜನರ ಶ್ರದ್ಧಾ ಕೇಂದ್ರದ ಮೇಲೆ ಮಾನಹಾನಿ ಮಾಡುವ ಕಾಯಕವನ್ನು ಕೆಲವರು ಇತ್ತೀಚಿಗೆ ರೂಡಿ ಮಾಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ಆರಂಭಿಸಲಾಗಿದೆ.ಜೈನ ಸಮಾಜ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ.ವಿ.ವೀರೇಂದ್ರ ಹೆಗ್ಗಡೆಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಅಪಪ್ರಚಾರವನ್ನ ಮಾಡಲಾಗುತ್ತಿದೆ ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಸಹ ಪ್ರತಿಭಟಿಸಲಾಯಿತು.
ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ ಸಿಎಂ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡುವೆ ಅರಣ್ಯ ಇಲಾಖೆಯ ಜಾಗದಲ್ಲಿ ಸಾವಿರಕ್ಕೂ ಹೆಚ್ಚು ಹೆಣ ಹೂತಿರುವೆ ಎಂದಿರುವ ಅನಾಮಿಕನನ್ನ ಯಾಕೆ ಬಂಧಿಸಿಲ್ಲ. ಅರಣ್ಯ ಕಾಯ್ದೆಯನ್ನ ನೇರವಾಗಿ ಉಲ್ಲಂಘಿಸಿರುವ ಅನಾಮಿಕನನ್ನ ರಕ್ಷಿಸಲಾಗಿದೆ. ಹಿಂದೂಗಳ ಬಗ್ಗೆ ತಾತ್ಸಾರ ನಡೆಯುತ್ತಿದೆ. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನ ಮುಜರಾಯಿ ಇಲಾಖೆ ಅಡಿ ತರುವ ಪ್ರಯತ್ನ ನಡೆಯಲಾಯಿತು ಕೆಲ ಹಿಂದೂಗಳ ಆಕ್ಷೇಪಣೆಯಿಂದ ಕೈ ಬಿಡಲಾಯಿತು ಎಂದರು.
ಜೆಡಿಎಸ್ ಕೋರ್ ಸಮಿತಿಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ರಕ್ಷಣೆ ಬೇಡೋದು ಧರ್ಮಸ್ಥಳಕ್ಕೆ. ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಶ್ರೀರಕ್ಷೆ ನಮಗೆ ಆಶೀರ್ವಾದ. ಶ್ರೀಕ್ಷೆತ್ರದ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರೆ ಕೋಟಿ ಪ್ರತಿಭಟನೆಗಳಾಗುತ್ತವೆ. ಇಲ್ಲಿಯ ವರೆಗೆ ನಡೆದ ತನಿಖೆ ಅಸ್ಪಷ್ಟವಾಗಿದೆ. ಮಧ್ಯಾಂತರ ವರದಿ ಬರಬೇಕಿತ್ತು. ಅನಾಮಿಕನ ಮಂಪರು ಪರೀಕ್ಷೆ ಮಾಡಿ ನಂತರ ಶೋಧನೆ ನಡೆಸಿ ಎಂದು ತಿಳಿಸಿಸಿದರು.