ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ರಾಷ್ಟ್ರಾಭಿಮಾನದ ಕರೆಯ ಮೇರೆಗೆ ದೇಶಾದ್ಯಂತ ಇಂದಿನಿಂದ ಆರಂಭವಾಗಿರುವ “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ ಶಿಕಾರಿಪುರ ತಾಲ್ಲೂಕು ಯುವ ಮೋರ್ಚಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಂಡಿದ್ದ “ಬೃಹತ್ ಬೈಕ್ ರ್ಯಾಲಿ” ಸಂಸದ ಬಿ ವೈ ರಾಘವೇಂದ್ರ ಚಾಲನೆ ನೀಡಿದರು.

ಬೃಹತ್ ಬೈಕ್ ರ್ಯಾಲಿ ನಂತರ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪ್ರತಿಷ್ಠಾಪಿಸಿರುವ ವಿಶ್ವಗುರು ಶ್ರೀ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಮಹಾನ್ ಕವಯತ್ರಿ ಅಕ್ಕಮಹಾದೇವಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗೌರವ ಪೂರ್ವಕ ಮಾಲಾರ್ಪಣೆ ಮಾಡಿ ದೇಶಕ್ಕೆ ನೀಡಿದ ಅವರ ಕೊಡುಗೆಯನ್ನು ನೆನಪು ಮಾಡಿಕೊಳ್ಳಲಾಯಿತು.

ನಂತರ ಶಿಕಾರಿಪುರದ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥವಾಗಿ ಹೋರಾಡಿದ ನೂರಾರು ಮಹಾನ್ ದಾರ್ಶನೀಕರನ್ನು ಅವರ ಕೊಡುಗೆಗಳನ್ನು ತ್ಯಾಗ ಬಲಿದಾನವನ್ನು ನೆನಪು ಮಾಡಿಕೊಳ್ಳಲಾಯಿತು.

ಇಂದಿನಿಂದ ಆಗಸ್ಟ್ 15 ರ ವರೆಗೆ ಪ್ರತಿ ಮನೆಯಲ್ಲೂ ಎಲ್ಲರೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಮಹತ್ವದ ಅಭಿಯಾನವನ್ನು ಯಶಸ್ವಿಗೊಳಿಸಿ ಭವ್ಯ ಭಾರತದ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀ ವೀರಣ್ಣ ಗೌಡ ಅವರು, ಶ್ರೀ ಪ್ರವೀಣ್ ಅವರು, ಶ್ರೀ ವಿನಯ್ ಅವರು, ಶ್ರೀ ರಾಜು ಅವರು, ಶ್ರೀ ಬಸವರಾಜ್ ಅವರು, ಶ್ರೀ ಚನ್ನವೀರಪ್ಪ ಅವರು, ಶ್ರೀ ಶಿವಣ್ಣ ಅವರು ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಜೊತೆಗಿದ್ದರು.