ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಲಕರದ ಗುರುಮೂರ್ತಿ ರವರ ಹುಟ್ಟುಹಬ್ಬ ಆಚರಿಸಲಾಯಿತು.ಜಿಲ್ಲೆಯ ಯಾವುದೇ ಸಂಘಟನಾತ್ಮಕ ಚಳವಳಿಗಳಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ ಗುರುಮೂರ್ತಿಯವರ ಪಾಲಿದೆ. ವಿವಿಧ ಸಂಘಟನೆಗಳ ಮತ್ತು ತುಳಿತಕ್ಕೊಳಗಾದ ಜನರ ಭಾವನಾತ್ಮಕ ಮತ್ತು ನಿರಂತರವಾದ ಸಂಬಂಧವನ್ನು ಅವರು ಹೊಂದಿದ್ದು ಅವರ ಕಣ್ಣೀರು ಕೆಲಸವನ್ನು ಸದಾ ಮಾಡುತ್ತಿದ್ದಾರೆ ಎಂದು ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಪ್ರೊ. ಟಿ ಅವಿನಾಶ್ ಹೇಳಿದರು.
ಗುರುಮೂರ್ತಿ ಅವರಿಗೆ ಸಮಾಜದ ಬಗ್ಗೆ ಕಾಳಜಿ, ಪ್ರೀತಿ ಇದೆ. ಹೋರಾಟದ ಅನುಭವದ ಜ್ಞಾನವಿದೆ. ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ಕೊಡುತ್ತಿದ್ದಾರೆ. ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಟಿ ಕೃಷ್ಣಪ್ಪ ಅವರ ಹಾದಿಯಲ್ಲಿ ಬೆಳೆದು ಬಂದು ಅವರ ಮಾರ್ಗದರ್ಶನದಂತೆಯೇ ಇಂದಿಗೂ ಸಹ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡು ಸಾವಿರಾರು ಜನರಿಗೆ ನೆರವಾಗಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು. ಅಪ್ಪಟ ಮನುಷ್ಯನಾಗಿ ಅವರು ಎಲ್ಲರಿಗೂ ಕಂಡುಬರುತ್ತಿದ್ದಾರೆ. ಸಮಾಜದಲ್ಲಿ ಎಲ್ಲರೊಡನೆಯೂ ಒಡನಾಡುತ್ತ, ಅವಕಾಶ ವಂಚಿತರಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಗುಣ ಅವರಲ್ಲಿದೆ. ಅವರ ಸಾಮಾಜಿಕ ವ್ಯಕ್ತಿತ್ವದಿಂದಲೇ ಅವರು ಜನಪ್ರಿಯರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಲವರ ಸಂಘದ ಮುಖಂಡರು ಅಭಿಮಾನಿಗಳು ಮತ್ತು ದಲಿತ ಸಂಘರ್ಷ ಸಮಿತಿಯ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.