ಎಫ್ ಪಿ ಎ ಐ ಶಿವಮೊಗ್ಗ ಫ್ಯಾಮಿಲಿ ಪ್ಲಾನಿಂಗ್ ಸಂಸ್ಥೆಯಿಂದ ನಗರದ ಗುಂಡಪ್ಪ ಶೆಡ್ ಆಸ್ಪತ್ರೆಯ ಸಭಾಂಗಣದಲ್ಲಿ ಸಹ್ಯಾದ್ರಿ ಕಾಲೇಜು BSW ವಿದ್ಯಾರ್ಥಿಗಳಿಗೆ ಓರಿಯೆಂಟಷನ್ ತರಬೇತಿ ಕಾರ್ಯಕ್ರಮವನ್ನು ಸಂಸ್ಥೆಯ ಪೂರ್ವಾಧ್ಯಕ್ಷರಾದ ಪುಷ್ಪ ಶೆಟ್ಟಿ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು BSW ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ತರಬೇತಿ ತುಂಬಾ ಪ್ರಮುಖವಾದದ್ದು. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಚಟುವಡಿಯಲ್ಲಿ ಭಾಗವಿಸಬೇಕು.ಮುಂದಿನ ದಿನಗಳಲ್ಲಿ ನೀವು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಸೇರಬೇಕೆಂಬ ಮನೋಭಾವ ಇದ್ದರೆ ಕ್ರೀಡಾ ವಿಭಾಗದಲ್ಲಿ ತುಂಬಾ ಉಪಕಾರಿಯಾಗಿ ಕೆಲಸ ಪಡೆಯುವುದಕ್ಕೆ ಸಹಕಾರಿಯಾಗಲಿದೆ.ಜೊತೆಗೆ ಹದಿಹರೆಯದ ಸಮಸ್ಯೆ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಎಫ್ ಪಿ ಎ ಐ ನ ಅಧ್ಯಕ್ಷರಾದ ಡಾ.ಸಾತ್ವಿಕ್, ಮೆಡಿಕಲ್ ಆಫೀಸರ್ ಚಿನ್ಮಯಿ, ಪ್ರೋಗ್ರಾಮ್ ಆಫೀಸರ್ ತೇಜಸ್ವಿನಿ, ಸತೀಶ್, ಅರವಿಂದ್ ಮತ್ತು ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರಾದ ರವಿಕುಮಾರ್,ಮತ್ತು ಬ್ರಾಂಚ್ ಮ್ಯಾನೇಜರ್ ಉಮೇಶ್ ಉಪಸ್ಥಿತರಿದ್ದರು.