ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ರಿಲಯನ್ಸ್ ಸಂಸ್ಥೆಯ ಸಹ ಬಾಗಿತ್ವದಲ್ಲಿ ಕುಡಿಯುವ ನೀರಿನ ಬಾಟಲಿಯ ಮೇಲೆ ಪ್ಲಾಸ್ಟಿಕ್‌ನಲ್ಲಿ ರಾಷ್ಟ್ರಧ್ವಜದಂತೆ ಕಾಣುವ ಚಿತ್ರವನ್ನು ಮುದ್ರಿಸಿ, ಸಗಟು ಮಾರಟ ಹಾಗೂ ಚಿಲ್ಲರೇ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕೆಲವೊಂದು ಆಹಾರ ಪದಾರ್ಥದ ಚೀಲದ ಮೇಲೂ ಸಹ ರಾಷ್ಟ್ರಧ್ವಜವನ್ನು ಹೋಲುವ ಚಿಹ್ನೆ ಸಹ ಮುದ್ರಿತವಾಗಿರುತ್ತದೆ. ಈ ಬಾಟಲಿಯು ಜನರು ಕುಡಿದ ಮೇಲೆ ಎಲ್ಲಿಂದರಲ್ಲಿ ಎಸೆಯುವುದರಿಂದ ರಾಷ್ಟ್ರಧ್ವಜಕ್ಕೆ ಅವಮಾನಿಸಲಾಗುತ್ತದೆ. ಅಲ್ಲದೇ ಆ ಬಾಟಲಿಯನ್ನು ಎಲ್ಲರೂ ತುಳಿದುಕೊಂಡು ಓಡಾಡುವ ಸಾಧ್ಯತೆಯೂ ಹೆಚ್ಚಿರುವದರಿಂದ ರಾಷ್ಟ್ರಧ್ವಜಕ್ಕೆ ಅವಮಾನಿಸಿದಂತಾಗುತ್ತದೆ ಎಂದರು.

ನಾಳೆ ಸ್ವಾತಂತ್ರ್ಯ ದಿನಾಚರಣೆ ಅಂಗಾವಾಗಿ ಧ್ವಜಾರೋಹಣಕ್ಕೆ ಸಾವಿರಾರು ಸಂಖ್ಯೆ ಜನರು ಸೇರುವುದರಿಂದ ಎಲ್ಲೆಂದರಲ್ಲಿ ನೀರಿನ ಬಾಟಲಿಗಳು ಎಸೆಯುವ ಸಾಧ್ಯತೆ ಹೆಚ್ಚಿದ್ದು, ಬಾಟಲಿಯ ಮೇಲಿನ ಧ್ವಜಕ್ಕೆ ಅವಮಾನವನ್ನ ತಪ್ಪಿಸಲು ಬಾಟಲಿಯ ನಿಷೇಧಿಸುವಂತೆ ಈ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್, ನಗರ ಅಧ್ಯಕ್ಷ ಜೀವನ್ ಸ್ವಾಭಿಮಾನಿ ಬಣದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.