79 ಸ್ವಾತಂತ್ರ ದಿನಾಚರಣೆ 2025 ರ ಪ್ರಯುಕ್ತ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ.ಬಸ್.ನಿಲ್ದಾಣದಲ್ಲಿ ನೇಸರ ಸೆಂಟರ್ ಫಾರ್ ರೂರಲ್ ಅಡ್ವಾನ್ಸ್ ಮೆಂಟ್ (ರಿ), ಶಿವಮೊಗ್ಗ,
ನಿಸರ್ಗ ಶಿಕ್ಷಣ ನಗರ & ಗ್ರಾಮೀಣಾಭಿವೃದ್ಧಿ ಸಂಸ್ಥೆ,(ರಿ) ರಿಪ್ಪನ್ ಪೇಟೆ, ಶ್ರೀ ಅನ್ನಪೂರ್ಣಶ್ವರಿ ಸ್ವಸಹಾಯ ಸಂಘ, ವಿನೋಬನಗರ, ಶಿವಮೊಗ್ಗ ಮಹಾಲಕ್ಷ್ಮೀ ಆಟೋಮೊಬೈಲ್ಸ್, ಆಟೋಕಾಂಪ್ಲೆಕ್ಸ್, ಶಿವಮೊಗ್ಗ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕರ ಪರವಾಗಿ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ವ್ಯವಹಾರಿಕಯಾದ ಶ್ರೀಮತಿ ಅನುಪಮಾ.T.R. ಮತ್ತು ಕೋಲಾರ ವಿಭಾಗ ದಿಂದ ಕೊಲ್ಲೂರು ಹೋಗುವ ಕ.ರಾ.ರ. ಸಾ.ಸಂಸ್ಥೆ. ಬಸ್ ಚಾಲಕರಾದ ಶ್ರೀ ನಾಗರಾಜ್ & ನಿರ್ವಹಕರಾದ ಶ್ರೀ ಶ್ರೀ ಮಂಜುನಾಥ್.K. ರವರುಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅಭಿಪ್ರಾಯ ಪಡೆದು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ಅಭಿನಂದನ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಲ್ದಾಣ ಅಧಿಕಾರಿಗಳಾದ ಶ್ರೀ ಕೃಷ್ಣ ಮುರ್ತಿ, ದೂದಾನಾಯಕ್ ವಿಚಾರಣಾ ಕೊಠಡಿ ಹಾಗೂ ಎಲ್ಲ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಸಾಕ್ಷಿಯಾದರು.