ವಿಜ್ಞಾನ ತಂತ್ರಜ್ಞಾನ ಸಂಶೋಧನೆ ಮತ್ತು ಕಲಾ ಪ್ರಗತಿ ಸಂಸ್ಥೆ (SASTRA) ಹಾಗು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತ(KSSRC) ವತಿಯಿಂದ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯ (KSNUAHS), ಶಿವಮೊಗ್ಗ ಇವರ ಸಹಯೋಗದಲ್ಲಿ ಐದು ದಿನಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನ – ಅನ್ವೇಷಣೋತ್ಸವ2025 ಕಾರ್ಯಕ್ರಮ ನಡೆಸಲಾಗುತ್ತಿದೆ. ದಿನಾಂಕ 18-08-2025 ರಿಂದ 22-8-2025 ರವರೆಗೆ ದೇಶದ ವಿವಿಧ ಸರ್ಕಾರಿ ಹಾಗು ಖಾಸಗಿ ಸಂಸ್ಥೆಗಳು ಭಾಗವಹಿಸಲಿವೆ.
ಇಸ್ರೋ ನಡೆಸುವ ಸ್ಪೇಸ್ ಆನ್ ವೀಲ್ಸ್ (Space on Wheels) ಈ ಪ್ರದರ್ಶನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಬಾಹ್ಯಾಕಾಶ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಬಗ್ಗೆ ಕುತೂಹಲ ಮೂಡಿಸಲು ರೂಪುಗೊಂಡಿದೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ವಿಜ್ಞಾನ ಕಂಪು ಪಸರಿಸುವ ಉದ್ದೇಶವಾಗಿದೆ.
ಇಸ್ರೋ ಕಾರ್ಯಕ್ರಮದ ವೈಶಿಷ್ಟ್ಯಗಳು:
• ಉಪಗ್ರಹಗಳ ಮಾದರಿ ಪ್ರದರ್ಶನ (INSAT, ಚಂದ್ರಯಾನ, ಮಂಗಳಯಾನ ಇತ್ಯಾದಿ)
• ಉಡಾವಣಾ ವಾಹನಗಳ ಮಾದರಿ (PSLV, GSLV ಇತ್ಯಾದಿ)
• ಬಾಹ್ಯಾಕಾಶ ನೌಕೆಗಳ ಚಿತ್ರ-ಮಾದರಿಗಳು
• ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಪೋಸ್ಟರ್ ಹಾಗೂ ಮಾಹಿತಿ ಫಲಕಗಳು
• ಆಡಿಯೋ-ವಿಜುವಲ್ ಪ್ರದರ್ಶನಗಳು
• ವಿದ್ಯಾರ್ಥಿಗಳೊಂದಿಗೆ ಸಂವಾದ (ಇಸ್ರೋ ವಿಜ್ಞಾನಿಗಳಿಂದ)
ವಿ.ಐ.ಟಿ.ಎಂ – ಸೈನ್ಸ್ ಆನ್ ವೀಲ್ಸ್
ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಸಂಗ್ರಹಾಲಯ (Visvesvaraya Industrial & Technological Museum – VITM) ನಡೆಸುವ “ಸೈನ್ಸ್ ಆನ್ ವೀಲ್ಸ್” (Museum on Wheels) ಮೊಬೈಲ್ ಪ್ರದರ್ಶನವು ಗ್ರಾಮಾಂತರ ಹಾಗೂ ಅರೆ-ನಗರ ಪ್ರದೇಶಗಳ ಜನತೆಗೆ ವಿಜ್ಞಾನ ತಲುಪಿಸುವ ವಿಶಿಷ್ಟ ಯೋಜನೆಯಾಗಿದೆ.
ಈ ಬಸ್‌ನಲ್ಲಿ 24 ವೈಜ್ಞಾನಿಕ ಪ್ರದರ್ಶನ ವಸ್ತುಗಳು ಅಳವಡಿಸಲ್ಪಟ್ಟಿದ್ದು, ಜನರು ತಮ್ಮ ಊರನ್ನು ಬಿಟ್ಟುಕೊಳ್ಳದೆ ವಿಜ್ಞಾನವನ್ನು ಅನುಭವಿಸಲು ಅವಕಾಶ ದೊರೆಯುತ್ತದೆ.
VITM ಕಾರ್ಯಕ್ರಮದ ವೈಶಿಷ್ಟ್ಯಗಳು:
• ಬಸ್‌ನಲ್ಲಿ ಅಳವಡಿಸಿದ 24 ವಿಜ್ಞಾನ ಪ್ರದರ್ಶನ ವಸ್ತುಗಳು
• ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಾಯೋಗಿಕ ಮಾದರಿಗಳು
• ಪ್ರದರ್ಶನ + ವಿವರಣೆ ಮೂಲಕ ಸರಳವಾಗಿ ವಿಜ್ಞಾನ ಪರಿಚಯ
• ವಿದ್ಯಾರ್ಥಿಗಳಿಗೆ ಹಸ್ತಪ್ರಯೋಗ (hands on learning) ಕಲಿಕೆಯ ಅನುಭವ.
ಉದ್ದೇಶಗಳು:
• ಪ್ರಾಯೋಗಿಕ ಕಲಿಕೆಯಿಂದ ವಿಜ್ಞಾನ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು.
ಡಿಆರ್‌ಡಿಓ (Defence Research and Development Organisation)
ತನ್ನ ತಂತ್ರಜ್ಞಾನ ಸಾಧನೆಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಪರಿಚಯಿಸಲು ವಿವಿಧ ಜನಸಂಪರ್ಕ (Outreach) ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.
ಇವುಗಳ ಮೂಲಕ ದೇಶದ ರಕ್ಷಣಾ ಕ್ಷೇತ್ರದಲ್ಲಿ ನಡೆದಿರುವ ವಿಜ್ಞಾನ-ತಂತ್ರಜ್ಞಾನ ಆವಿಷ್ಕಾರಗಳನ್ನು ಜನಸಾಮಾನ್ಯರಿಗೂ ತಲುಪಿಸಲಾಗುತ್ತದೆ.
DRDO ಕಾರ್ಯಕ್ರಮದ ವೈಶಿಷ್ಟ್ಯಗಳು:
• ಪ್ರದರ್ಶನಗಳು – ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ, ರಕ್ಷಣಾ ತಂತ್ರಜ್ಞಾನ, ರೋಬೋಟಿಕ್ಸ್, ರಾಡಾರ್, ಡ್ರೋನ್‌ಗಳು ಇತ್ಯಾದಿ
• ವಿದ್ಯಾರ್ಥಿ ಕಾರ್ಯಾಗಾರಗಳು – ವಿಜ್ಞಾನ-ತಂತ್ರಜ್ಞಾನದಲ್ಲಿ ವೃತ್ತಿ ರೂಪಿಸಲು ಪ್ರೇರಣೆ ನೀಡುವುದು
• ವೀಡಿಯೊ / ಚಲನಚಿತ್ರ ಪ್ರದರ್ಶನ – ಉದಾಹರಣೆಗೆ ಮಿಷನ್ ಶಕ್ತಿ ಕುರಿತ ಮಕ್ಕಳಿಗಾಗಿ ಡಾಕ್ಯುಮೆಂಟರಿ ತಯಾರಿಸಲಾಗಿತ್ತು, ಇದರಲ್ಲಿ ಡಿಆರ್‌ಡಿಓ ಸಾಮರ್ಥ್ಯಗಳನ್ನು ಸರಳವಾಗಿ ವಿವರಿಸಲಾಗಿದೆ
• ವಿಜ್ಞಾನಿಗಳೊಂದಿಗೆ ಸಂವಾದ – ವಿದ್ಯಾರ್ಥಿಗಳಿಗೆ ನೇರ ಪ್ರೇರಣೆ ಮತ್ತು ಮಾರ್ಗದರ್ಶನ.
ಪ್ಲಾಸ್ಮಾ ಸಂಶೋಧನಾ ಸಂಸ್ಥೆ (IPR)
ಪ್ಲಾಸ್ಮಾ ಮತ್ತು ಫ್ಯೂಷನ್ ತಂತ್ರಜ್ಞಾನ ಜನರಿಗೆ ಹತ್ತಿರ
ಪ್ಲಾಸ್ಮಾ ಸಂಶೋಧನಾ ಸಂಸ್ಥೆ (Institute for Plasma Research – IPR), ಗಾಂಧಿನಗರ, ಗುಜರಾತ್
ಇದು ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ (DAE) ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದ್ದು, ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನದಲ್ಲಿ ದೇಶದ ಮುಂಚೂಣಿಯ ಸಂಸ್ಥೆ.
ಪ್ರದರ್ಶನದ ವೈಶಿಷ್ಟ್ಯಗಳು:
• ಪ್ಲಾಸ್ಮಾದ ಜೀವಂತ ಪ್ರದರ್ಶನಗಳು – ವಿವಿಧ ಬಗೆಯ ಪ್ಲಾಸ್ಮಾ ಮತ್ತು ಅವುಗಳ ಪ್ರಾಯೋಗಿಕ ಉಪಯೋಗಗಳು
• ತ್ಯಾಜ್ಯ ನಿರ್ವಹಣೆ (Waste Management)
• ವಸ್ತ್ರೋದ್ಯಮ (Textile Industry)
• ವೈದ್ಯಕೀಯ ಕ್ಷೇತ್ರ (Medical Applications)
• ಫ್ಯೂಷನ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನಗಳು
• ಟೋಕಮಾಕ್ (Tokamak) ಮಾದರಿ ಮತ್ತು ಅದರ ಪ್ಲಾಸ್ಮಾ ಬಂಧನ ಕಾಯಿಲ್‌ಗಳು
• ಐಟರ್ (ITER) ಯೋಜನೆಯ ಸ್ಕೇಲ್ ಮಾದರಿ
• ಕ್ರಯೊ-ಪಂಪ್ (Cryo-pump) ಹಾಗೂ ಅದರ ಉಪಯೋಗಗಳು
• ಪೋಸ್ಟರ್‌ಗಳು ಮತ್ತು ಮಾಹಿತಿ ಫಲಕಗಳು – ಪ್ಲಾಸ್ಮಾ ತಂತ್ರಜ್ಞಾನದ ಸಂಶೋಧನೆ ಮತ್ತು ಅದರ ಭವಿಷ್ಯ.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿಶೇಷ
• ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ಲಾಸ್ಮಾ ಮತ್ತು ಫ್ಯೂಷನ್ ವಿಜ್ಞಾನದಲ್ಲಿ ಜ್ಞಾನ ವೃದ್ಧಿ
• ವಿಜ್ಞಾನ ಪ್ರೇಮಿಗಳಿಗೆ ಹೊಸ ತಂತ್ರಜ್ಞಾನಗಳ ಪರಿಚಯ
• ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿ ರೂಪಿಸಲು ಪ್ರೇರಣೆ ಮತ್ತು ಮಾರ್ಗದರ್ಶನ.
ಭಾರತ ಡೊಮ್ ಇನೋವೇಶನ್ಸ್ ರವರ ಮೊಬೈಲ್ ಪ್ಲಾನೆಟೋರಿಯಂ ಮತ್ತು ಟೆಲಿಸ್ಕೋಪ್ (Bharath Dome Innovation’s Planetarium & Telescope) ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಡೋಮ್ (Full-dome) ಶೋಗಳು ಮೂಲಕ ಬಾಹ್ಯಾಕಾಶದ ಅದ್ಭುತ ಜಗತ್ತನ್ನು ಪರಿಚಯಿಸುತ್ತದೆ. ಇದು ಶಾಲೆಗಳು, ಕಾಲೇಜುಗಳು ಹಾಗೂ ಸಮುದಾಯ ಕೇಂದ್ರಗಳಿಗೆ ತೆರಳಿ ಜ್ಯೋತಿಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನವನ್ನು ನೇರವಾಗಿ ತಲುಪಿಸುತ್ತದೆ.
ಭಾರತ್ ಡೊಮ್ ಕಾರ್ಯಕ್ರಮದ ವೈಶಿಷ್ಟ್ಯಗಳು:
• ನಕ್ಷತ್ರಗಳು, ಗ್ರಹಗಳು, ಆಕಾಶಗಂಗೆಗಳು ಮತ್ತು ಬಾಹ್ಯಾಕಾಶ ಮಿಷನ್‌ಗಳ ಬಗ್ಗೆ ಡೋಮ್ ಶೋಗಳು
• ಇಂಟರಾಕ್ಟಿವ್ ಸೆಷನ್‌ಗಳು ಹಾಗೂ ಹಸ್ತಪ್ರಯೋಗ ಚಟುವಟಿಕೆಗಳು
• ಟೆಲಿಸ್ಕೋಪ್ ತಯಾರಿ ಹಾಗೂ ಮಾದರಿ ರಾಕೆಟ್ ನಿರ್ಮಾಣ ಕಾರ್ಯಾಗಾರಗಳು
• ವಿಜ್ಞಾನಿಗಳಿಂದ ನೇರ ಪ್ರಸ್ತುತಿಗಳು
ಉದ್ದೇಶಗಳು:
• ಯುವ ಮನಸ್ಸಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕುತೂಹಲ ಮೂಡಿಸುವುದು
• ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿರುವ ತಾಂತ್ರಿಕ ಶಕ್ತಿ ಮತ್ತು ಸ್ವಾವಲಂಬನೆ ಪರಿಚಯಿಸುವುದು
• ವಿಜ್ಞಾನ ಮತ್ತು ಇಂಜಿನಿಯರಿಂಗ್ ವೃತ್ತಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು
ಉದ್ದೇಶ:
• ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲ ಬೆಳೆಸುವುದು
• ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧಿಸಿದ ಹೆಜ್ಜೆಗುರುತುಗಳನ್ನು ಪರಿಚಯಿಸುವುದು
• ಯುವ ಮನಸ್ಸಿನಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಪ್ರೇರಣೆ ಮೂಡಿಸುವುದಾಗಿದೆ ಎಂದು ಆಯೋಜನಾ ಸಮಿತಿಯ ಸದಸ್ಯರಾದ ಡಾ. ಎಸ್. ಓಂಕಾರ್ ನಾಯ್ಕ್, (ಅಧ್ಯಕ್ಷರು, SASTRA) ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.