ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷವಾಗಿ 79ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.ದೇಶಭಕ್ತಿ ಗೀತೆಯನ್ನು ಹಾಡೋದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮತ್ತು ಆನೆಟ್, ಜಾನ್ಸ್ (ಮಕ್ಕಳಿಗೆ) ಸ್ವಾತಂತ್ರ ಹೋರಾಟಗಾರರ ಚದ್ಮ ವೇಷ ಏರ್ಪಡಿಸಲಾಗಿತ್ತು. ಇದರಲ್ಲಿ ಎಲ್ಲ ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಚಂದ ಕಾಣಿಸಿಕೊಟ್ಟರು.
ಇದೇ ಸಮಯದಲ್ಲಿ ನೇವಿಯಲ್ಲಿ ಸೇವೆ ಸಲ್ಲಿಸಿದ ನಮ್ಮ ಕ್ಲಬ್ಬಿನ ಸದಸ್ಯರಾದ ರೋಟೇರಿಯನ್ ಧನಂಜಯ್ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ರೋಟರಿ ಸದಸ್ಯರು ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಬಸವರಾಜ್ ಬಿ. ಕಾರ್ಯದರ್ಶಿ ಜಯಶೀಲ ಶೆಟ್ಟಿ ,ಆನ್ಸ ಅಧ್ಯಕ್ಷರಾದ ರಾಜಶ್ರೀ ಬಸವರಾಜ್, ಕಾರ್ಯದರ್ಶಿ ಮಥುರಾ ಧನಂಜಯ ಇದ್ದರು.