ಚಿಕ್ಕಮಗಳೂರು:
ನಗರದ ದೊಡ್ಡಕುರುಬರಹಳ್ಳಿಯ ಬಸವತತ್ವ ಪೀಠದಲ್ಲಿ ಡಾ.ಬಸವ ಮರುಳಸಿದ್ದಸ್ವಾಮಿಗಳವರ ಸಾನಿಧ್ಯದಲ್ಲಿ ಆ.22 ರಿಂದ 27 ರವರೆಗೆ ‘ನೋಡುವುದನ್ನೇ ನೋಡೋಣ’, ಸದಭಿರುಚಿಯ ಸಿನಿಮಾ ಪ್ರದರ್ಶನ ಏರ್ಪಡಿಲಾಗಿದೆ.

ಬಸವಮಂದಿರದಲ್ಲಿ ಪ್ರತಿದಿನ ಸಂಜೆ 6 ರಿಂದ 8.30 ರವರೆಗೆ ಪ್ರದರ್ಶನ ನಡೆಯಲಿದೆ. ಆ.22 ರಂದು ಕಾರಣಿಕ ಶಿಶು ಸಿನಿಮಾ ಪ್ರದರ್ಶನವಾಗಲಿದ್ದು ಈ ಚಿತ್ರ ದ ಬಗ್ಗೆ ಓಹಿಲೇಶ್ ಲಕ್ಷ್ಮಣ್ ಸಂವಾದ ನಡೆಸುವರು. ಆ.23 ರಂದು ಸಂತಿಶುನಾಳ ಷರೀಫ್, ಸಂವಾದ -ಎಚ್.ಕೆ.ಪ್ರೇಮಕುಮಾರ್, ಆ.24 ತಬರನ ಕಥೆ, ಸಂವಾದ-ಪೇಮಲತಾ ನಾಗರಾಜ್, ಆ.25 ತಲೆದಂಡ, ಸಂವಾದ- ಪ್ರವೀಣ್ ಕೃಪಾಕರ್, ಆ.26 ಅಲ್ಲಮ, ಸಂವಾದ -ವೈದ್ಯ, ಆ.27 ಚಿಗುರಿದ ಕನಸು, ಸಂವಾದ -ನಾಗಶ್ರೀ ತ್ಯಾಗರಾಜ್ ನಡೆಸಿಕೊಡಲಿದ್ದಾರೆ ಎಂದು ಶ್ರೀ ಬಸವತತ್ವ ಪೀಠದ ಪ್ರಕಟಣೆ ತಿಳಿಸಿದೆ.