ಶಿವಮೊಗ್ಗ ಓಪನ್ ಕರಾಟೆ ಪಂದ್ಯಾವಳಿಯಲ್ಲಿ ಅಕ್ಷರಧಾಮ ಶಾಲೆಯ ಮಕ್ಕಳಿಗೆ ಬಹುಮಾನ ದೊರೆತಿದೆ.

ಇತ್ತೀಚೆಗೆ ಆಗಸ್ಟ್ 9 ಮತ್ತು 10ರಂದು ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಓಪನ್ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಅಕ್ಷರಧಾಮ ಶಾಲೆಯ ವಿದ್ಯಾರ್ಥಿಗಳು ಕಥ ಮತ್ತು ಕುಮತಿಯ ವಿವಿಧ ವಿಭಾಗದಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.


ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿಕ್ಸೇನ್ ಮತ್ತು ಕರಾಟೆ ಕೋಚ್ ಪ್ರೀತಿ ಶ್ರೀ ಉಪಸ್ಥಿತರಿದ್ದು ವಿಜೇತ ಕ್ರೀಡಾಪಟುಗಳಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ
ಶಿವಮೊಗ್ಗ ವಿನೋದ್ ಶುಭ ಕೋರಿದ್ದಾರೆ.