ಸರ್ವೋಚ್ಚ ನ್ಯಾಯಾಲಯವು 2016 ರಲ್ಲಿ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿರುತ್ತದೆ. ಆದರೂ ಕೂಡ ಇಲ್ಲಿಯವರೆಗೆ ಅಬಕಾರಿ ಅಧಿಕಾರಿಗಳು 500 ಮೀಟರ್ ವ್ಯಾಪ್ತಿ ಒಳಗಿರುವ ಮದ್ಯದಂಗಡಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ . ಮಾನ್ಯ ಸರ್ವೋಚ್ಚ ನ್ಯಾಯಾಲಯವು 2016ರಲ್ಲಿ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಲು ನೀಡಿರುವ ಆದೇಶವನ್ನೇ ಪಾಲಿಸುವಂತೆ 2021ರ ಆಗಸ್ಟ್ ತಿಂಗಳಲ್ಲಿ ಆದೇಶ ಹೊರಡಿಸಿದ್ದು ಸಂಬಂಧಪಟ್ಟ ಅಧಿಕಾರಿಗಳು ಭದ್ರಾವತಿ ತಾಲ್ಲೂಕಿನಲ್ಲಿರುವ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿ ಒಳಗಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕು ಹಾಗೂ ಹೊಸದಾಗಿ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬಾರದೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 2019 ಅಲ್ಲಿಂದ ಇಲ್ಲಿಯವರೆಗೂ 4ಲಕ್ಷದ 50.000 ಅಪಘಾತಗಳು ವರದಿಯಾಗಿದ್ದು ಅದರಲ್ಲಿ 1.55.000 ಮಂದಿ ಮೃತಪಟ್ಟಿದ್ದು ಅವುಗಳನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ 1ಲಕ್ಷ ಇದ್ದು ಅದೇ ರೀತಿ 2ಲಕ್ಷ ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ದಿಂದ ಶೇಕಡಾ 75ರಷ್ಟು ಅಂಗವೈಕಲ್ಯ ಹೊಂದಿರುತ್ತಾರೆ ಎಂದು ಹೆದ್ದಾರಿ ಸಚಿವಾಲಯ ಮಾಹಿತಿ ನೀಡಿರುತ್ತದೆ. ಈ ವಿಚಾರವನ್ನು ಅಬಕಾರಿ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಅದೇ ರೀತಿ ಡೈರಿ ಸರ್ಕಲ್ ನಲ್ಲಿ 2ಮದ್ಯದಂಗಡಿಗಳಿದ್ದು ಮದ್ಯದಂಗಡಿಗಳು ಕೂಡ ಹೆದ್ದಾರಿ ಪಕ್ಕದ 500 ಮೀಟರ್ ವ್ಯಾಪ್ತಿಯೊಳಗೆ ಇದ್ದು ಇತ್ತೀಚೆಗೆ ಕಳೆದ ವಾರ ಆ ಮದ್ಯದಂಗಡಿಗಳಲ್ಲಿ ಮದ್ಯಪಾನ ಮಾಡಿ ಪದೇ ಪದೇ ಗಲಾಟೆಗಳಾಗುತ್ತಿದ್ದವು ಸಂಬಂಧಪಟ್ಟ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಆ ಮದ್ಯದಂಗಡಿಗಳ ಪಕ್ಕಾ 2 ಮೀಟರ್ ಅಂತರದಲ್ಲಿ ಹೆದ್ದಾರಿ ಇದ್ದು 35 ಮೀಟರ್ ಕೈಂಕರ್ಯದಲ್ಲಿ ನಮ್ಮ ಭಾರತೀಯ ಪರಂಪರೆಯನ್ನು ಉಳಿಸುವಂತಹ ಅವಿವೇಕದ ಕಾಲೇಜು ಮತ್ತು ಆಸ್ಪತ್ರೆ ಇದ್ದು ಆ ಕಾಲೇಜಿಗೆ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಮತ್ತು ಚಿಕಿತ್ಸೆಗೆಂದು ಬರುವ ರೋಗಿಗಳು ಹಿರಿಯ ನಾಗರಿಕರು ಹಾಗೂ ಕೆ.ಎಸ್. ಆರ್. ಪಿ ಕುಟುಂಬದವರು ಗಾರ್ಮೆಂಟ್ಸ್ ಮಹಿಳೆಯರು ಹಾಗೂ ಜಯಂತಿಗ್ರಾಮ, ನವುಲೆ, ಬಸಾಪುರ, ಹೊನ್ನವಿಲೆ, ಮಜ್ಜಿಗೆಹಳ್ಳಿ ಇರುವ ಗ್ರಾಮಸ್ಥರು ಶಿವಮೊಗ್ಗ ಅಥವಾ ಭದ್ರಾವತಿಗೆ ಕೂಲಿ ಕೆಲಸಕ್ಕೆ ಮಾರುಕಟ್ಟೆಗೆ ತೆರಳಲು ಡೈರಿ ಸರ್ಕಲ್ ಗೆ ಬರಬೇಕಾಗಿದ್ದು ಅಲ್ಲಿರುವ ಮದ್ಯದಂಗಡಿಗಳಿಂದ ಎಲ್ಲಾ ನಾಗರಿಕರಿಗೂ ಮಹಿಳೆಯರಿಗೂ ವಿದ್ಯಾರ್ಥಿನಿಯರಿಗೂ ಓಡಾಡಲು ತೊಂದರೆಯಾಗುತ್ತಿದೆ. ಇದೇ ವಿಚಾರವಾಗಿ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಹಿರಿಯ ನಾಗರಿಕರು ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಆದ್ದರಿಂದ ಮೇಲ್ಕಂಡ ವಿಷಯವನ್ನು ಪರಿಶೀಲನೆ ಮಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿ ಹೆದ್ದಾರಿ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವುಗೊಳಿಸಿ ನಾಗರಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಭದ್ರಾವತಿ ಅಬಕಾರಿ ಕಚೇರಿ ಮುಂದೆ ದಿನಾಂಕ 1-09-2021ರಿಂದ ನ್ಯಾಯ ದೊರಕುವವರೆಗೂ ಲಾಕ್ ಡೌನ್ ನಿಯಮವನ್ನು ಪಾಲಿಸಿ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುವಂತೆ ತಮ್ಮಲ್ಲಿ ತಿಳಿಯಪಡಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153