ಪ್ರಸ್ತುತ ಕರ್ನಾಟಕದಲ್ಲಿ ವಿಜಯಾ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಗೊಳಿಸಲಾಗಿದೆ. ಕನ್ನಡಿಗರ ಹೆಮ್ಮೆಯಾಗಿದ್ದು ವಿಜಯ ಬ್ಯಾಂಕ್ ಅನ್ನು ಆರ್ಥಿಕವಾಗಿ ಮುಗ್ಗಟ್ಟಿನಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರ್ಪಡೆಗೊಳಿಸಲಾಗಿದೆ. ಈಗ ಬಹು ಮುಖ್ಯ ಅಂಶವೆಂದರೆ ವಿಜಯ ಬ್ಯಾಂಕ್ ನ ಎಟಿಎಂ ಗಳನ್ನು ಬ್ಯಾಂಕ್ ಆಫ್ ಬರೋಡಾ ಎಟಿಎಂ ಗಳನ್ನಾಗಿ ಬದಲಾಯಿಸಲಾಗಿದೆ. ಪ್ರಸ್ತುತ ಇರುವ ಎಲ್ಲ ಎಟಿಎಂಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಯ ಆಯ್ಕೆ ಇರುತ್ತದೆ. ಎಟಿಎಂನಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನೇ ಕೊಡದೆ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದೀರಿ. ಇದು ಹಿಂದಿ ಹೇರಿಕೆಯ ಚಾಣಾಕ್ಷ ನಡೆಯಾಗಿದ್ದು . ನಮ್ಮ ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದಲ್ಲಿ ನೀವು ವ್ಯವಹರಿಸುವಾಗ ಕನ್ನಡವನ್ನೇ ಕಡೆಗಣಿಸುವುದು ಎಷ್ಟು ಸರಿ ? . ಅದೇ ನಿಮ್ಮ ಎಟಿಎಂ ಹೊರಭಾಗದಲ್ಲಿ ನಿಮ್ಮ ಲಾಭದಾಯಕ ವಿಷಯ ಅಂದರೆ ಚಿನ್ನ ಸಾಲ ಹಾಗೂ ಫಿಕ್ಸೆಡ್ ಡೆಪಾಸಿಟ್ ಗಾಗಿ ಕನ್ನಡ ಬ್ಯಾನರನ್ನು ಹಾಕಿದ್ದೀರಿ. ಅಂದರೆ ಕನ್ನಡವನ್ನು ನಿಮ್ಮ ಲಾಭಕ್ಕಾಗಿ ಮಾತ್ರ ಬಳಸುತ್ತಿದ್ದೀರಿ. ಕರ್ನಾಟಕದಲ್ಲಿ ಕನ್ನಡವೆ ಅಗ್ರ ಭಾಷೆ ನೀವು ಕನ್ನಡವನ್ನು ನಿಮ್ಮ ಬ್ಯಾಂಕಿನಲ್ಲಿ ಕಡೆಗಣಿಸುತ್ತಿರುವುದು ಇದು ಮೊದಲೇನಲ್ಲ ಈಗ ಎಟಿಎಂನಲ್ಲಿ ಹಿಂದಿ ಹೇರಿಕೆ ಮಾಡಿ ಕನ್ನಡವನ್ನು ಕಡೆಗಣಿಸುತ್ತಿದೆ . ಇದರಿಂದ ಕನ್ನಡಿಗರಿಗೆ ನಿಮ್ಮ ಎಟಿಎಂನಲ್ಲಿ ವ್ಯವಹರಿಸಲು ತೊಂದರೆಯಾಗುತ್ತಿದೆ. ತಕ್ಷಣ ಸರಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ವಿರುದ್ಧವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕನ್ನಡ ರಕ್ಷಣಾ ವೇದಿಕೆ ಯುವ ಸೇನೆಯ ಜಿಲ್ಲಾಧ್ಯಕ್ಷ ರಾದ ಕಿರಣ್ ಕುಮಾರ್ ಅವರು ಎಚ್ಚರಿಸಿದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕಾರ್ಯಾಧ್ಯಕ್ಷರಾದ ಶಿವಕುಮಾರ್ ಗ್ರಾಮದ ಅಧ್ಯಕ್ಷರಾದ ನಾಗೇಂದ್ರ ನಗರ ಅಧ್ಯಕ್ಷರಾದ ಸತೀಶ್ ಯುವ ಘಟಕ ಅಧ್ಯಕ್ಷರಾದ ಜಯಪ್ಪ ಮುಂತಾದವರು ಉಪಸ್ಥಿತರಿದ್ದರು…

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ