ದೂರುದಾರರಾದ ಶಿವಮೊಗ್ಗ ತಾಲ್ಲೂಕಿನ ಗೊಂದಿಚಟ್ನಹಳ್ಳಿ ನಿವಾಸಿ ನಾಗರಾಜ ಎಂಬುವವರಿAದ ಎದುರುದಾರರಾದ ಹೆಚ್‌ಡಿಬಿ ಫೈನಾನ್ಸಿಯಲ್ ಸರ್ವೀಸ್ ಶಿವಮೊಗ್ಗ, ಹೆಚ್‌ಡಿಬಿ ಫೈನಾನ್ಸಿಯಲ್ ಮುಂಬೈ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಶಿವಮೊಗ್ಗ ಇವರು ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿದ ಕಾರಣಕ್ಕಾಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಗಣಿಸಿ, 1 ಮತ್ತು 2ನೇ ಎದುರುದಾರರು ಸೂಕ್ತ ಪರಿಹಾರ ನೀಡಬೇಕೆಂದು ಆದೇಶಿಸಿದೆ.
ದೂರುದಾರರು ತಮ್ಮ ಜೀವನ ನಿರ್ವಹಣೆಗಾಗಿ ಒಂದು ಜೆಸಿಬಿ ಖರೀದಿಸಿದ್ದು, 1 ಮತ್ತು 2 ನೇ ಎದುರುದಾರರಿಂದ ರೂ.31,65,625 ಲಕ್ಷ ಸಾಲವನ್ನು ಪಡೆದು 60 ತಿಂಗಳ ಇಎಂಐ ಅನ್ನು 4/2/2023 ರಿಂದ 4/10/2023 ರವೆಗೆ ಪಾವತಿಸಬೇಕಾಗಿರುತ್ತದೆ. ದೂರುದಾರರು ಮಾಸಿಕ ಎಲ್ಲಾ ಇಎಂಐ ಗಳನ್ನು ಪಾವತಿಸಿಕೊಂಡು ಬರುತ್ತಿದ್ದು ವೈಯಕ್ತಿಕ ಕಾರಣಗಳಿಂದ 2 ಇಎಂಐಗಳನ್ನು ಪಾವತಿಸಲು ಸಾಧ್ಯವಾಗದೇ, ಅಕೋಬ್ಟರ್-2024 ರಂದು ಉಳಿಕೆಯಾದ 2 ಇಎಂಐಗಳನ್ನು ಪಾವತಿಸುವುದಾಗಿ ಭರವಸೆಯನ್ನು ಕೊಟ್ಟಿರುತ್ತಾರೆ.
ಆದರೆ 14/10/2024 ರಂದು ಶಿವಮೊಗ್ಗ ಸಿಟಿಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದಾಗ 1 ಮತ್ತು 2 ನೇ ಎದುರುದಾರರು ಮತ್ತು ಏಜೆಂಟರು ಜೆಸಿಬಿಯನ್ನು ತಮ್ಮ ವಶಕ್ಕೆ ಪಡೆದಿರುತ್ತಾರೆ.
ತದನಂತರ ದೂರುದಾರರು ಎದುರುದಾರರ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಉಳಿಕೆ ಇಎಂಐ ಗಳನ್ನು ಪಾವತಿಸಲು ಹೇಳಿರುತ್ತಾರೆ. ಅದರಂತೆ ರೂ.50,000 ಪಾವತಿಸಿ ಜೆಸಿಬಿಯನ್ನು ಕೊಡಲು ಕೇಳಿರುತ್ತಾರೆ. ಆದರೂ ಎದುರುದಾರರು ಜೆಸಿಬಿ ಯನ್ನು ದೂರುದಾರರಿಗೆ ನೀಡಿರುವುದಿಲ್ಲ. 1 ಮತ್ತ 2ನೇ ಎದುರುದಾರರು ದಿ:16/12/2024 ರಂದು ಪತ್ರ ಬರೆದು ನಿಮ್ಮ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ. 1 ಮತ್ತು 2 ನೇ ಎದುರುರಾರರು ದೂರುದಾರರಿಗೆ ಯಾವುದೇ ರೀತಿಯ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ ಜೆಸಿಬಿ ಯನ್ನು ವಶಕ್ಕೆ ಪಡೆದು ಹರಾಜು ಮೂಲಕ ಮಾರಾಟ ಮಾಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ದೂರನ್ನು ಸಲ್ಲಿಸಿರುತ್ತಾರೆ.