ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಯಶಸ್ವಿ ಅನುಷ್ಟಾನ ಹಾಗೂ ಅನೇಕ ಯೋಜನೆಗಳ ಪ್ರಗತಿಯ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಈ ಕೆಳಕಂಡ ಅಂಶಗಳನ್ನು ಪರಿಶೀಲನೆ ನೆಡೆಸಲಾಯಿತು.

  1. ರೂ 784.00 ಕೋಟಿ ವೆಚ್ಚದ ಮನೆ ಮನೆ ಶುದ್ಧ ಕುಡಿಯುವ ನೀರಿನ ಯೋಜನೆ.
  2. PM JANMAN ಯೋಜನೆಯಲ್ಲಿ ರೂ 4.89 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಹಾಗೂ ರೂ 1.80 ಕೋಟಿ ವೆಚ್ಚದಲ್ಲಿ MPC ಹಾಲ್ ಗಳ ನಿರ್ಮಾಣ.
  3. ರೂ 394.95 ಕೋಟಿ ವೆಚ್ಚದ ಬೈಂದೂರು-ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆ.
  4. ರೂ 170.00 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ 4 ಅಂಡರ್ ಪಾಸ್ ನಿರ್ಮಾಣ.
  5. PM ವಿಶ್ವಕರ್ಮ ಯೋಜನೆ.
  6. PM ಸೂರ್ಯ ಘರ್, PM ಕುಸುಮ್ ಯೋಜನೆ.
  7. PM AWAS ನಗರ ಹಾಗೂ ಗ್ರಾಮೀಣ ಯೋಜನೆ.

ಸೇರಿದಂತೆ ಇನ್ನೂ ಅನೇಕ ಯೋಜನೆಗಳ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಯಿತು.