ನಗರದ ಕೇಂದ್ರ ಕಾರಾಗೃಹದಲ್ಲಿ 59ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರದ ಸಂತೋಷ್ ಎಂಎಸ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಓದು ಬರಹ ಕಲಿತು ಸಾಕ್ಷರತಾ ವಾಗುವುದರಿಂದ ಯಾವುದು ತಪ್ಪು ಯಾವುದು ಸರಿ ಎಂಬ ತಿಳುವಳಿಕೆ ಮನಸ್ಸಿನಲ್ಲಿ ಮೂಡುತ್ತಿದೆ. ಕಾನೂನಿನ ಕುರಿತು ಸರಿಯಾದ ಅರಿವನ್ನು ಪಡೆದುಕೊಳ್ಳಲು ಕಲಿಕೆಯಿಂದ ಸಹಾಯವಾಗುತ್ತದೆ.ಇದರಿಂದ ಅಪರಾಧ ಚಟುವಟಿಕೆಗಳು ತಡೆಗಟ್ಟಬಹುದು. ಅಕ್ಷರ ಕಲಿಕೆಯಿಂದ ಬದುಕಿನಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ ಎಂದರು.


ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ ಪಿ ರಂಗನಾಥ್ ರವರು ಮಾತನಾಡಿ ಓದು ಬರಹ ಕಲಿಯುವುದರಿಂದ ನಡತೆಯಲ್ಲಿ ಉತ್ತಮ ಬದಲಾವಣೆ ಮೂಡಿ ಬರುತ್ತದೆ. ಸಮಾಜದಲ್ಲಿ ಗೌರವ ಸ್ಥಾನಮಾನ ಪಡೆಯಲು ಸಾಕ್ಷರತೆ ನೆರವಾಗುತ್ತದೆ ಎಂದು ಹೇಳಿದರು.