ಜೆಸಿಐ ಭಾರತ – ವಲಯ 24, ನಾಯಕತ್ವ, ಕಲಿಕೆ, ಕ್ರೀಡೆ, ವ್ಯವಹಾರ ಮತ್ತು ಸಮುದಾಯದ ಪ್ರಭಾವದ ಒಂದು ವಾರದ ಹಬ್ಬವಾದ ಜೆಸಿಐ ಸಪ್ತಾಹ 2025 ರ ಭವ್ಯ ಆಚರಣೆಯ ಅಂಗವಾಗಿ ಇಂದು ಬೆಳಗ್ಗೆ ನೆಹರು ಕ್ರೀಡಾಂಗಣದಲ್ಲಿ ಏಕತೆ ಮತ್ತು ಬದ್ಧತೆಯನ್ನು ಸಂಕೇತಿಸುವ ಧ್ವಜಾರೋಹಣವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರು ನೆರವೇರಿಸಿ ನಂತರ ವಾಕ್ಥಾನ್ ಜಾಥಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜೆಸಿಐ ಸಂಸ್ಥೆಯು ಸುಮಾರು ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಒಂದು ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ, ಅದೇ ರೀತಿ ಒಂದು ವಾರಗಳ ಕಾಲ ಜೆಸಿಐ ಸಪ್ತಾಹ ಆಚರಣೆ ಮುಖಾಂತರ ಕಲಿಕೆ, ಕ್ರೀಡೆ, ಯುವ ಸಮುದಾಯವನ್ನು ನಾಯಕತ್ವ, ಕೌಶಲ್ಯಾಭಿವೃದ್ಧಿಗೆ ಆಕರ್ಷಿಸುವಂತಹ ಸಂವಾದಗಳನ್ನು ನಡೆಸುವ ಮುಖಾಂತರ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಲಯ ಅಧ್ಯಕ್ಷರು ಸೆನೇಟರ್ ಗೌರೀಶ್ ಭಾರ್ಗವ, ಅವರು ಜೆಸಿಐ ಸಪ್ತಾಹಕ್ಕೆ ಶಿವಮೊಗ್ಗದ ಎಲ್ಲಾ ಘಟಕಗಳಿಗೆ ಶುಭ ಕೋರಿದರು. ವಲಯ ಉಪಾಧ್ಯಕ್ಷರುಗಳಾದ JFM ಪ್ರಮೋದ್ ಶಾಸ್ತ್ರಿ, JFS ಸುದರ್ಶನ್ ತಾಯಿ ಮನೆ, ವಲಯ ಕಾರ್ಯದರ್ಶಿ JFS ಆದರ್ಶ್,ಜೈಕಾಂ ಚೇರ್ಮನ್ JFM ಮೋಹನ್ ಕಲ್ಪತರು, ಮೀಡಿಯಾ ಟಾಸ್ಕ್ ಫೋರ್ಸ್ Jc ನವೀನ್ ಕುಮಾರ್ ಶಿವಮೊಗ್ಗದ ಎಲ್ಲಾ ಘಟಕ ಅಧ್ಯಕ್ಷರುಗಳಾದ JC ರೇಖಾ ರಂಗನಾಥ್, JC ರುದ್ರೇಶ್ ಕೋರಿ,JC ಸ್ಮಿತಾ ಮೋಹನ್, JC ಗಣೇಶ್ ಪೈ, JC ಸಂತೋಷ್ ,JC ಗಣೇಶ್ ಜಿ, JC ನಿವೇದಿತಾ, JC ಶಿಲ್ಪಾN, JC ಮಂಜುಳಾ ಕೇಶವ್, JC ಸ್ವಾತಿ, JC ಶಿಲ್ಪಾ, JC ನರಸಿಂಹ JC ವಿನೋದ್ ಹಾಗೂ ಎಲ್ಲಾ ಘಟಕಗಳ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.