ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬ್ರಿಟಿಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದಂತಹ ಮಹಾನ್ ವೀರ ಹುಟ್ಟಿದ ದಿನ ಆಗಸ್ಟ್ 15 ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ರಾಯಣ್ಣ ನವರನ್ನು ಬ್ರಿಟಿಷರು ನೇಣಿಗೆ ಹಾಕಿದ್ದು ಜನವರಿ 26ಕಂಡು ಭಾರತ ದೇಶ ಗಣರಾಜ್ಯವಾದಿನ ಇಂತಹ ರಾಷ್ಟ್ರ ವೀರನನ್ನು ಪಡೆದ ಭಾರತ ಧನ್ಯವಾಗಿದೆ. ಇಂತಹ ಮಹಾನ್ ಪುರುಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಿವಮೊಗ್ಗ ಜಿಲ್ಲೆ ‘ ಶಿಕಾರಿಪುರ ನಗರದಲ್ಲಿ ರಾತ್ರೋರಾತ್ರಿ ಹೆಡಿಗಳ ರೀತಿಯಲ್ಲಿ ತೆರವುಗೊಳಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅಪಮಾನ. ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಭೂಮಿ ಇಂತಹ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿರುವುದು ಈಸೂರು ದಂಗೆಗೂ ಮಾಡಿರುವ ಅಪಮಾನ ಮಾಡಿರುವುದು ಈಸೂರು ದಂಗೆ ಗೂ ಮಾಡಿರುವ ಅಪಮಾನ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ಸಂಗೊಳ್ಳಿ ರಾಯಣ್ಣ ಅವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ದೇಶಭಕ್ತನ ಮೂರ್ತಿ ತೆರವುಗೊಳಿಸಲಾಗಿದೆ. ಶಿವಮೊಗ್ಗದ ಸಂಸದರಾದ ಬಿ ವೈ ರಾಘವೇಂದ್ರರವರು, ಶಾಸಕರಾದ ಬಿ ಎಸ್ ಯಡಿಯೂರಪ್ಪನವರು, ಹಾಗೂ ತಾಲ್ಲೂಕು ಆಡಳಿತ ತನ್ನ ತಪ್ಪಿಗೆ ಕ್ಷಮೆ ಯಾಚಿಸಿ ರಾಯಣ್ಣನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಬೇಕಾಗಿದೆ ಈ ಮೂಲಕ ಆಗ್ರಹ ಪಡಿಸುತ್ತಿದ್ದೇವೆ.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ