ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳಿಗೆ ಪ್ರತ್ಯೇಕವಾಗಿ ಐ .ಎ .ಎಸ್ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ರಾಜ್ಯ ಸರ್ಕಾರದ ನಿಯಮವಿದ್ದರೂ ಸ್ವಹಿತಾಸಕ್ತಿಗೋಸ್ಕರ ಈ ಎರಡೂ ಇಲಾಖೆಯ ಅಧಿಕಾರವನ್ನು ಕೆ .ಎ .ಎಸ್ ಅಧಿಕಾರಿಯಾದ ಒಂದೇ ವ್ಯಕ್ತಿಗೆ ನೀಡಿ ಶಿವಮೊಗ್ಗ ಜನತೆಗೆ ಅನ್ಯಾಯ ಮಾಡಿರುತ್ತಾರೆ.* ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ನಗರದ ಕೆಲವು ವಾರ್ಡ್ ಗಳಲ್ಲಿ ಸುಮಾರು 3ವರ್ಷಗಳಿಂದ ಹಲವು ಕಾಮಗಾರಿಗಳು ನಡೆಯುತ್ತಿದ್ದು ಇದಕ್ಕಾಗಿ 1.485 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿಗಳು ಇಂದಿಗೂ ಕಬಳಿಕೆ ಹಾಗೂ ಒತ್ತುವರಿ ಆಗುತ್ತಲೇ ಇದೆ. * ವಿನೋಬನಗರ 100 ಅಡಿ ರಸ್ತೆಯ ಶಿವಾಲಯ ದೇವಸ್ಥಾನದ ಪಕ್ಕದಲ್ಲಿ ಸುಮಾರು 72 ಮಳಿಗೆ ವಾಣಿಜ್ಯ ಕಟ್ಟಡವನ್ನು ವಿನೋಬನಗರ ಪೊಲೀಸ್ ಚೌಕಿ ಹಾಗೂ ಲಕ್ಷ್ಮಿ ಟಾಕೀಸ್ ಸರ್ಕಲ್ ನಲ್ಲಿ ರಸ್ತೆ ವ್ಯಾಪಾರಿಗಳಾದ ಹೂವು,ಹಣ್ಣು ತರಕಾರಿ ಮುಂತಾದ ಚಿಲ್ಲರೆ ವ್ಯಾಪಾರಿಗಳಿಗೆ ನಿರ್ಮಾಣ ಮಾಡಿದರು. * ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಸಾರ್ವಜನಿಕರು ನಿರಾಳವಾಗಿ ಗಾಂಧಿ ಬಜಾರ್ ರಸ್ತೆಗೆ ಹೋಗಲು ಪರ್ಯಾಯ ಸುರಂಗ ಮಾರ್ಗವನ್ನು ಮಾಡಿದ್ದೆ ಸದರಿ ಸುರಂಗ ಮಾರ್ಗಕ್ಕೆ ಸುಮಾರು ಒಂದೂವರೆ ಕೋಟಿ ರೂಪಾಯಿಗಳಷ್ಟು ಹಣವನ್ನು ಖರ್ಚು ಮಾಡಿದರು.* ನೀರಿನ ಮೀಟರ್ ಗಳನ್ನು ಮನೆಯ ಕಂಪೌಂಡ್ ಒಳಗಡೆ ಹಾಕದೆ ರಸ್ತೆಯ ಬದಿಯಲ್ಲೇ ಹಾಕಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರುವ ಮೂಲಕ ಜನತೆಗೆ ಅನ್ಯಾಯ ಮಾಡಿರುತ್ತಾರೆ.* ಮಹಾನಗರ ಪಾಲಿಕೆಯ ಆಡಳಿತ ವೈಖರಿ ಪಾರದರ್ಶಕವಾಗಬೇಕಾದರೆ ಮಾಲಿಕೆಯ ವಹಿವಾಟುಗಳ ಗಣಕೀಕರಣ ಆಗಬೇಕೆಂದು ಬಹುವರ್ಷಗಳ ಸಾರ್ವಜನಿಕರ ಕೂಗಾಗಿದೆ.*ಮಹಾನಗರ ಪಾಲಿಕೆಯ ವತಿಯಿಂದ ಶಿವಮೊಗ್ಗ ನಗರದ ವಾಣಿಜ್ಯ ಕಟ್ಟಡ ಮನೆ ಮತ್ತು ನಿವೇಶನಗಳ ಕಂದಾಯವನ್ನೂ ತೆರಿಗೆ ರೂಪದಲ್ಲಿ ಪಡೆಯುವುದು. *ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ರಾಜಕಾಲುವೆಗಳಲ್ಲಿ ಸುಮಾರು ವರ್ಷಗಳಿಂದ ಹೂಳು ತುಂಬಿಕೊಂಡಿದು ಸದರಿ ರಾಜಕಾಲುವೆಗಳ ಹೂಳು ತೆಗೆಯುವ ಯೋಜನೆಯಲ್ಲಿ ಪ್ರತಿ ವರ್ಷ ಲಕ್ಷಾಂತರ₹ಖರ್ಚು ಮಾಡುತ್ತಿದ್ದರು.ಹೂಳು ಮಾತ್ರ ಹಾಗೇ ಇರುತ್ತದೆ ಆದರೆ ನಮ್ಮ ತೆರಿಗೆ ಹಣ ಯಾವ ಮಟ್ಟಿಗೆ ಬಳಕೆಯಾಗುತ್ತಿದೆ ಎಂದು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ ನಮ್ಮ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದಾರೆ. * ನಮಗೆ ಅನಾರೋಗ್ಯವಾದರೆ ವೈದ್ಯರಿದ್ದಾರೆ ಹಣ ಕಳೆದು ಹೋದರೆ ಮತ್ತೆ ದುಡಿದು ಸಂಪಾದಿಸಬಹುದು ದುರಭ್ಯಾಸಗಳಿಂದ ಹಾಳಾದರೂ ಹೇಳಬಹುದು ಆದರೆ ಭ್ರಷ್ಟಾಚಾರಕ್ಕೆ ಕಠಿಣ ಹಾಕದಿದ್ದರೆ ಮುಂದಿನ ಪೀಳಿಗೆಯ ಭವ್ಯ ಭವಿಷ್ಯಕ್ಕೆ ಮಾರಕವಾಗುವುದಂತೂ ಸತ್ಯ ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಅನಿವಾರ್ಯವಾಗುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ