ತುಂಗಾನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀರ ಕೇಸರಿ ಯುವಪಡೆ ಇಂದಿರಾನಗರ ಗಣಪತಿ ಮೆರವಣಿಗೆ ಸಮಯದಲ್ಲಿ ಇಂದಿರಾನಗರದ ತಾಜುದ್ದೀನ್ ಅಶುರ್ ಖಾನ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸಿಖ್ಬಾತ್, ಪದಾಧಿಕಾರಿಗಳಾದ ಅಮ್ಜದ್, ರಫೀಕ್ ಪಟೇಲ್, ಇರ್ಫಾನ್, ಆಟೋ ಅಸ್ಲಾಂ, ಮುನ್ನ,ಇರ್ಫಾಜ್,ಸಲೀಂ ಮತ್ತು ಗ್ರಾಮಸ್ಥರು ಗಣಪತಿ ಮೂರ್ತಿಗೆ ಪುಷ್ಪ ಮಾಲೆಯನ್ನು ಅರ್ಪಿಸಿ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಇಂದಿರಾನಗರ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳು ತಿಳಿಸಿ ಸೌಹಾರ್ದತೆಯನ್ನು ಮೆರೆದಿರುತ್ತಾರೆ.
ಈ ಸಂದರ್ಭದಲ್ಲಿ ಗಣಪತಿ ಕಮಿಟಿಯ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರು ಹಾಗು ತುಂಗಾನಗರ ಪೋಲಿಸ್ ಠಾಣಾ ಪಿಐ ಗುರುರಾಜ್ & ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.