ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಶಾಮಣ್ಣ ಟ್ರಸ್ಟ್( ರಿ) ಕಂಪಾನಿಯೋ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದ ಸಮರೋಪ ಸಮಾರಂಭ 10ರಂದು ಬುಧವಾರ ಸಂಜೆ 5 ಗಂಟೆಗೆ ಶ್ರೀರಂಗ ಸಭಾಭವನ ಶ್ರೀ ಆದಿರಂಗನಾಥ ದೇವಸ್ಥಾನ ಗೋಪಾಲದಲ್ಲಿ ಜರಗಿತು.
ಸಮಸ್ತ ಜನತೆಯ ಆರೋಗ್ಯದ ಕಾಳಜಿಯನಾದರಿಸಿ ಪ್ರಾರಂಭಿಸಿದ ಈ ಮಹತ್ಕಾರ್ಯ ಸಂಪೂರ್ಣ ಸಂಪನ್ನಗೊಂಡಿದ್ದು ಅನೇಕ ಜನರು ಅನೇಕ ರೀತಿಯ ಕಾರ್ಯಗಳಿಂದ ಪ್ರಯೋಜನ ಪಡೆದಿದ್ದಾರೆ.ಫೂಟ್ ತೆರಪಿಯು ವೈಜ್ಞಾನಿಕ ಮಾಹಿತಿ ನೀಡಲು ದಕ್ಷಿಣ ಭಾರತದಲ್ಲಿ 150ಕ್ಕೆ ಹೆಚ್ಚು ಬ್ರಾಂಚ್ ಹೊಂದಿರುವ ಹಾಗೂ ಕಂಪಾನಿಯೋ ಮೆಡಿಟೆಕ್ ಬೆಂಗಳೂರು ಮುಖ್ಯಸ್ಥರಾದ ರತ್ನಾಕರ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಶಿವಮೊಗ್ಗ ಬಸವರಾಜ್ ಬಿ, ಹಾಗೂ ಕಾರ್ಯದರ್ಶಿ ಜಯಶೀಲ ಶೆಟ್ಟಿ ಹಾಗೂ ಶ್ರೀ ಆದಿ ರಂಗನಾಥ ದೇವಸ್ಥಾನ ಇದರ ಆಡಳಿತ ಮುಖ್ಯಸ್ಥರಾದ ರೊಟೇರಿಯನ್ ಆನಂದ್ ಜಿಎಸ್ ಇದ್ದರು ರತ್ನಾಕರ್ ಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಪನಿಯ ಉನ್ನತ ಹಾಗೂ ದೇವಸ್ಥಾನದ ಮ್ಯಾನೇಜರ್ ಮುರುಳಿ ಇದ್ದರು. ಉಚಿತ ಫೂಟ್ ಪಲ್ಸ್ ತೆರಫಿ 14. 9. 2025 ಮುಂದುವರೆಯಲಿದೆ.