
ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಮಯ ಸೂಳೇ ಬೈಲ್ ದುರ್ಗಮ್ಮ ದೇವಸ್ಥಾನ ಕಮಿಟಿ ಹಾಗೂ ಗ್ರಾಮದ ಮುಖಂಡರುಗಳಾದ ನಾಗರಾಜ್,
ಅಶೋಕ, ಮನೋಜ್,
ಸಂತೋಷ್,ಪುಟ್ಟ, ಕುಮಾರ, ಎಮ್ ರಾಜು, ರಘು, ರಮೇಶ ಮುಂತಾದವರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳು ಕೋರಿ ಸಿಹಿಯನ್ನು ಹಾಗೂ ತಂಪು ಪಾನೀಯವನ್ನು ಹಂಚಿ ಭಾವೈಕ್ಯತೆ ಮೆರೆದಿರುತ್ತಾರೆ.
ಈ ಸಮಯದಲ್ಲಿ ಸುನ್ನಿ ಮೆಕ್ಕ ಮಸೀದಿ ಕಮಿಟಿ ಅಧ್ಯಕ್ಷರಾದ ಸಮಿವುಲ್ಲಾ ಹಾಗೂ ಕಮಿಟಿಯ ಸದಸ್ಯರುಗಳು ಮತ್ತು ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಇದೇ ಸಮಯದಲ್ಲಿ ಸಿದ್ದೇಶ್ವರ ವೃತ್ತ ದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂಧರ್ಬದಲ್ಲಿ ಹಿಂದೂ ಮುಖಂಡರಾದ ಪ್ರದಿಪ್ ಕಾವಾಡಿ,ಆನಂದ , ಮುರುಗನ್ , ರಿಯೋ, ಸುಜಿತ್ , ರಾಜು ಹಾಗು ಇತರರು ಮೆರವಣಿಗೆಯಲ್ಲಿದ್ದ ಮುಸ್ಲಿಂ ಬಾಂದವರಿಗೆ ಕೇಸರಿ ಬಾತ್ ಮತ್ತು ಪಾನೀಯ ವಿತರಿಸಿ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಮುಸ್ಲಿಂ ಮುಖಂಡರಾದ ಜಪ್ರುಲ್ಲಾ , ರಿಜ್ವಾನ್ , ಮಜ್ಜು ಮತ್ತು ಇತರರು ಮೆರವಣಿಗೆ ಸಹಕಾರ ನೀಡಿದ ತುಂಗಾ ನಗರ ಪಿಐ ಗುರುರಾಜ್ ಮತ್ತು ಸಮಸ್ತ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.