ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ಹುಟ್ಟುಹಬ್ಬವನ್ನು ಅವರ ಗೆಳೆಯಬಳಗ ಸಂಭ್ರಮ-ಸಡಗರದಿಂದ ಮೆರವಣಿಗೆಯಲ್ಲಿ ಕರೆತಂದು ಸೂಡಾ ಕಛೇರಿ ಮುಂಭಾಗದಲ್ಲಿ ಹಾಕಿದ್ದ ವೇದಿಕೆಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಜೈಕಾರ ಹಾಕಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಸುಂದರೇಶ್ ಅವರು ದ್ರೌಪದಮ್ಮ ದೇವಸ್ಥಾನ ರವೀಂದ್ರನಗರ ಗಣಪತಿ, ಕೋಟೆ ಶ್ರೀ ಮಾರಿಕಾಂಬ, ಪಂಚಮುಖಿ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬೈಕ್‌ರ್‍ಯಾಲಿಯ ಮೂಲಕ ಸೂಡಾ ಕಛೇರಿಯವರೆಗೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ನಂತರ ಬಹುದೊಡ್ಡ ಹಾರ ಹಾಕಲಾಯಿತು.
ವೇದಿಕೆಯಲ್ಲಿ ಮಾತನಾಡಿದ ಹಲವು ಮುಖಂಡರು ಸುಂದರೇಶ್ ಅವರು ಸೂಡಾ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಕೂಡ ಸಂಘಟಿಸಿದ್ದಾರೆ. ಸರಳಜೀವಿ ಆಗಿದ್ದಾರೆ. ಹಲವರಿಗೆ ನೆರವು ನೀಡಿದ್ದಾರೆ ಎಂದು ಕೊಂಡಾಡಿದರು. ವಿಶೇಷವಾಗಿ ಮಹಿಳೆಯರು ಹಾಡು, ಕುಣಿತ ಹಾಗೂ ಅಕ್ಷತೆ ಹಾಕಿ ಓಕುಳಿ ಮಾಡುವ ಮೂಲಕ ಸಂಭ್ರಮಿಸಿದರು.
ಹೆಚ್.ಎಸ್. ಸುಂದರೇಶ್ ಸನ್ಮಾನಿತರಾಗಿ ಮಾತನಾಡಿ, ತಮ್ಮ ಅಭಿಮಾನಕ್ಕೆ ಅಭಿನಂದನೆಗಳು ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೌಗಂಧಿಕ, ಕೆ. ರಂಗನಾಥ್, ಪ್ರವೀಣ್‌ಕುಮಾರ್, ಎನ್.ಎಸ್. ಸಿದ್ದಪ್ಪ, ಶರತ್ ಮರಿಯಪ್ಪ, ಚಾಮರಾಜ್, ಶಿ.ಜು. ಪಾಷಾ, ಧೀರರಾಜ್ ಹೊನ್ನವಿಲೆ, ಶಿವಣ್ಣ, ರಾಜು, ಸಮೀನಾ ಕೌಸರ್, ನಾಜೀಮಾ, ರೇಷ್ಮಾ, ಕೌಸರ್ ಸೇರಿದಂತೆ ಹೆಚ್.ಎಸ್. ಸುಂದರೇಶ್ ಅಭಿಮಾನಿಗಳು ಉಪಸ್ಥಿತರಿದ್ದರು.