
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಶಾಸಕ ಚನ್ನಬಸಪ್ಪ ಮತ್ತು ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಪತ್ರಿಕಾಗೋಷ್ಠಿ ನಡೆಸಿದರು.ದಸರಾ ಹಬ್ಬವನ್ನ ವಿಶಿಷ್ಟ ಹಾಗೂ ವಿನೂತನವಾಗಿ ಶಿವಮೊಗ್ಗದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.ಕಳೆದ 2 ದಶಕದಿಂದ ಆರಂಭವಾಗಿ ಈ ಬಾರಿ 10 ದಿನ ದಸರಾ ನಡೆಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಈ ಬಾರಿ ಸೆ.22 ರಿಂದ ಅ.2 ರವರೆಗೆ ದಸರಾ ನಡೆಯಲಿದ್ದು ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನೆಯನ್ನ ಸೆ.22 ರಂದು ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಲಾಗುವುದು. ನಿವೃತ್ತ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮೇಶ್ವರ ರಾಜು ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು. ಅಧ್ಯಕ್ಷರೆಯನ್ನ ಶಾಸಕ ಚೆನ್ನಬಸಪ್ಪ ವಹಿಸಲಿದ್ದಾರೆ ಎಂದರು.
ಶಾಸಕ ಚೆನ್ನಬಸಪ್ಪ ಮಾತನಾಡಿ, ದಸರಾದ ಎಲ್ಲಾ ಸಿದ್ಧತೆ ಭರದಿಂದ ನಡೆದಿದೆ.ವೈಭವದ ಅಂಬಾರಿ ಉತ್ಸವಕ್ಕೆ ಸಿದ್ದತೆ ನಡೆದಿದೆ. 11 ದಿನಗಳ ಕಾಲ ದಸರಾ ನಡೆಯಲಿದೆ ಎಂದರು.
ಈಗಾಗಲೇ ಅನೇಕ ದಸರಾಗಳ ಕಾರ್ಯಕ್ರಮ ನಡೆದಿದೆ. ಅ.2 ರಂದು ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ. ಶಿವಮೊಗ್ಗದ ಕೋಟೆಯಲ್ಲಿರುವ ಅರಮನೆ ಆವರಣದಿಂದ ಅ.2 ಮಧ್ಯಾಹ್ನ 2-30 ರಿಂದ ನಂದಿ ಧ್ವಜ ಪೈಜೆಯ ನಂತರ ಅಂಬಾರಿ ಮೆರವಣಿಗೆ ಹೊರಟು ಅಲ್ಲಮ ಪ್ರಭು ಫ್ರೀಡಂಪಾರ್ಕ್ ತಲುಪಲಿದೆ ಎಂದರು.ದಸರಾ ಉತ್ಸವ ಸಮಿತಿಯಲ್ಲಿ ದೇವರನ್ನ ಕರೆದು ದಸರಾ ಮೆರವಣಿಗೆಯಲ್ಲಿ ಭಾಗಿಯಾಗಲು ಕರೆಯಲಾಗುತ್ತದೆ. ಪತ್ರಿಕಾ ದಸರಾ, ಪೌರಕಾರ್ಮಿಕ ದಸರಾ, ಮಹಿಳಾ ದಸರಾ, ಜ್ಞಾನ ದಸರಾ, ಮಕ್ಕಳ ದಸರಾ, ಹೀಗೆ 12 ದಸರದಲ್ಲಿ ಹಲವು ಕೆಲಸಗಳನ್ನ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಶಾಸಕರು ಮತ್ತು ಎಂಎಲ್ಸಿ ಗಳು ಎಲ್ಲಾ ದಸರಾ ಸಮಾರಂಭಗಳಲ್ಲಿ ಮುಖ್ಯ ಅತಿಥಿಗಳು ಭಾಗಿಯಾಗಲಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಡಿಸಿ, ಮೊದಲಾದ ಅಧಿಕಾರಿಗಳು ವಿಶೇಷ ಆಹ್ವಾನಿತರಾಹಿರಲಿದ್ದಾರೆ. ನಟ ಶಿವರಾಜ್ ಕುಮಾರ್ ಸಹ ಆಗಮಿಸಲಿದ್ದಾರೆ ಅ.24 ರಂದು ನಟ ಶರಣ್, ನಟಿ ಕಾರುಣ್ಯರಾಮ್, ನಿರ್ದೇಶಕ ಸಾಯಿ ಪ್ರಕಾಶ್, ನಿರ್ದೇಶಕಿ ರೂಪ ಅಯ್ಯರ್ ಆಗಮಿಸಲಿದ್ದು ರಂಗ ದಸರಾ ಉದ್ಘಾಟನೆಗೆ ರಂಗ ಕರ್ಮಿ ಗಣೇಶ ಮಂದರ್ತಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಸಂಜೆ 6 ಗಂಟೆಗೆ ಆಹಾರ ಮೇಳ ನಡೆಯಲಿದ್ದು , ಅ. 29 ರಂದು ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ನಡೆಯಲಿದೆ. ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.