ಬಂಟರ ಯಾನೆ ನಾಡವರ ಸಂಘ, ಶಿವಮೊಗ್ಗ


ಬಂಟ್ ಯಾನೆ ನಾಡವ ಸಮಾಜ ಬಾಂಧವರಿಗೆ ಸೂಚನೆ


ಕರ್ನಾಟಕ ರಾಜ್ಯ ಸರಕಾರವು 2025 ರಲ್ಲಿ ಹೊಸದಾಗಿ ಜಾತಿ ಗಣತಿಯನ್ನು ಈಗಾಗಲೇ ಪ್ರಾರಂಭ ಮಾಡಿರುವುದು ತಮಗೆಲ್ಲ ತಿಳಿದ ವಿಚಾರವಾಗಿದೆ.

ಸರಕಾರದ ಈ ಅಂಕಿ ಅಂಶಗಳು ನಮ್ಮ ಮುಂದಿನ ಪೀಳಿಗೆಗೆ ಅಧಿಕೃತ ದಾಖಲೆಗಳಾಗಿ ಉಳಿಯುತ್ತವೆ.
ಜಾತಿಗಣತಿ ಮಾಡಲು ಗಣತಿದಾರರು ತಮ್ಮ ಮನೆಗೆ ಬಂದಾಗ ತಮ್ಮ ಹೆಸರು ಮತ್ತು ಉಪನಾಮ ( ಸರ್ ನೇಮ್ ) ಇವುಗಳನ್ನು ಆಧಾರ್ ಕಾರ್ಡ್ ನಲ್ಲಿರುವಂತೆ ಅಥವಾ ಶಾಲಾ ದಾಖಲೆಗಳಲ್ಲಿ ಇರುವಂತೆ ಸ್ಪಷ್ಟವಾಗಿ ಬರೆಯಿರಿ.

ಪ್ರಜ್ಞಾವಂತರಾದ ಸಮಾಜ ಬಾಂಧವರು ಸಮೀಕ್ಷೆಗಾಗಿ ಮನೆಗೆ ಬರುವವರ ಮೊಬೈಲ್ ಅಪ್ಲಿಕೇಶನ್ ನಲ್ಲಿ ಇರುವ 8 ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದು ಎಂದು ನಮೂದಿಸುವುದು, 9 ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ A – 0227 ರಂತೆ ಬಂಟ್ (BUNT) ಎಂದು ನಮೂದಿಸುವುದು, 11ನೇ ಕಾಲಂನಲ್ಲಿ ಸಮನಾರ್ಥಕ/ಪರ್ಯಾಯ ಹೆಸರು ಎಂದು ಇರುವ ಜಾಗದಲ್ಲಿ ಕೋಡ್ ಸಂಖ್ಯೆ A -1026 ರಂತೆ ನಾಡವ (NADAVA) ಎಂದು ನಮೂದಿಸಬೇಕು.

ಅದೇ ರೀತಿಯಾಗಿ 9 ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ A-1026 ರಂತೆ ನಾಡವ (NADAVA) ಎಂದು ನಮೂದಿಸುವುದು, 11ನೇ ಕಾಲಂನಲ್ಲಿ ಸಮನಾರ್ಥಕ/ಪರ್ಯಾಯ ಹೆಸರು ಎಂದು ಇರುವ ಜಾಗದಲ್ಲಿ ಕೋಡ್ ಸಂಖ್ಯೆ A – 0227 ರಂತೆ ಬಂಟ್ (BUNT) ಎಂದು ನಮೂದಿಸಬೇಕು.

ಸಮಾಜ ಬಾಂಧವರು ಇದೇ ರೀತಿಯಾಗಿ ಕುಟುಂಬದ ಯಾವುದೇ ಸದಸ್ಯರ ಹೆಸರು ಬಿಟ್ಟು ಹೋಗದಂತೆ ಸಮೀಕ್ಷೆಯ ಸಂದರ್ಭದಲ್ಲಿ ಎಲ್ಲರನ್ನೂ ನೋಂದಾಯಿಸಿಕೊಳ್ಳುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ಬದ್ಧವಾಗಿ ಸಿಗಬೇಕಾದ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸಹಕರಿಸುವಂತೆ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಡಾ. ಎ. ಸತೀಶ್ ಕುಮಾರ್ ಶೆಟ್ಟಿ ಮತ್ತು ಕಾರ್ಯದರ್ಶಿ ಶ್ರೀ ಸುರೇಶ್ ಶೆಟ್ಟಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *