ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿರುವ ದಸರಾ 2025 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಚಾಮುಂಡೇಶ್ವರಿ ಬೆಳ್ಳಿ ವಿಗ್ರಹವನ್ನು ಮಹಾನಗರ ಪಾಲಿಕೆ ಆವರಣದಿಂದ ನಗರದ ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಯಿತು.

ನಿವೃತ್ತ ಉಪಸೇನಾ ದಂಡಾಧಿಕಾರಿ ಬಿ ಎಸ್ ರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆಪರೇಷನ್ ಸಿಂಧೂರ ಆದಾಗ ಭಾರತೀಯ ಸೇನೆ ವಾಯುಪಡೆ ಮಾತ್ರ ಹೋಗಲ್ಲ.ಇಡೀ ದೇಶ ಹೋಗುತ್ತದೆ. ದೇಶ ಹಿಂದೆ ನೀವು ಇದ್ದಾಗ ಮಾತ್ರ ಗೆಲುವು ಖಚಿತ.22 ತಿಂಗಳ ಹಿಂದೆ ನಿವೃತ್ತಿಯಾಗಿದ್ದೇನೆ.50 ವರ್ಷಗಳ ಕಾಲ ಸಮವಸ್ತ್ರ ಧರಿಸಿದ್ದೇನೆ. ಪತ್ನಿಯ ಬೆಂಬಲ ಇದೆ.ಗಂಡಂದಿರು ಮುಂದೆ ಬರಲು ಪತ್ನಿಯ ಬೆಂಬಲ ಅತ್ಯಗತ್ಯ.ಸೇನೆಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ ಎಂದರು.

ಶಂಕರ್ ನಂದ ಜೋಯಿಸ್ ವೇದ ಗೋಶ ಮಾಡಿದರು. ಕಂದಾಯ ಅಧಿಕಾರಿ ನಾಗೇಂದ್ರ ಸ್ವಾಗತಿಸಿದರು. ಶಾಸಕ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಡಾ ಧನಂಜಯ್ ಸರ್ಜಿ ಆಯುಕ್ತರದ ಮಾಯಣ್ಣ ಗೌಡ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಧು ಮಾಜಿ ಸದಸ್ಯರಾದ ಹೆಚ್ ಸಿ ಯೋಗೇಶ್ ಜ್ಞಾನೇಶ್ವರ್ ಮೋಹನ್ ರೆಡ್ಡಿ ಯಮುನಾ ರಂಗೇಗೌಡ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಗೋವಿಂದ ಮತ್ತು ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *