
ದೇಶದಲ್ಲಿ GST 2.0 ಐತಿಹಾಸಿಕ ಸುಧಾರಣೆ ಮಾಡಿದ ಪ್ರಧಾನಿ ಮೋದಿಗೆ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಧನ್ಯವಾದಗಳನ್ನ ತಿಳಿಸಿದರು.ಈ ವೇಳೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘ ಸಹ ಪಾಲ್ಗೊಂಡು ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜೇಂದ್ರ, ಇಂದು ಐತಿಹಾಸಿಕ ದಿನ ಭಾರತಕ್ಕೆ ಅಮೇರಿಕಾ ದೊಡ್ಡಸವಾಲನ್ನ ಹಾಕಿದಾಗ ಪ್ರಧಾನಿ ಮೋದಿ ಯಾವುದಕ್ಕೂ ಜಗ್ಗಲಿಲ್ಲ ಎದೆಗಾರಿಕೆ ತೋರಿದರು. ಕಾಂಗ್ರೆಸ್ ಅಧಿಕಾರಕ್ಕಾಗಿ ಗರೀಬಿ ಹಟಾವ್ ಎಂದು ಚುನಾವಣೆ ಗೆದ್ದಿದ್ದಾರೆ. ಆದರೆ ಸುಧಾರಣೆ ಆಗಿಲ್ಲ ಎಂದು ದೂರಿದರು.
ಸ್ವಾಲಂಭಿ ಮತ್ತು ಸಂಮೃದ್ಧಿ ಭಾರತವಾಗಬೇಕು. ಜಾಗತಿಕ ಸವಾಲನ್ನ ಎದುರಿಸಬೇಕು 2047 ರಲ್ಲಿ ಅಭಿವೃದ್ಧಿ ಶೀಲ ಭಾರತವಾಗಬೇಕು ಎಂಬ ಕಲ್ಪನೆಯೊಂದಿಗೆ ಮೋದಿ ಹೊರಟಿದ್ದಾರೆ. ಜಾಗತಿಕ ಸವಾಲನಿನ ನಡುವೆ ಜಿಎಸ್ ಟಿ ಸುಧಾರಣೆ ಮಾಡಲಾಗಿದೆ. ಬಡವರು, ಮಧ್ಯಮ ಮತ್ತು ಉದ್ದಿಮೆ ವರ್ಗದವರಿಗೆ 12 ಮತ್ತು 5 ಪರ್ಸೆಂಟ್ ಜಿಎಸ್ ಟಿ ಇಟ್ಟುಕೊಂಡು ಉಳಿದೆ ಎರಡು ಸ್ಲಾಬ್ ಗಳನ್ನ ತೆಗೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ ಧನಂಜಯ ಸರ್ಜಿ, ಡಿ.ಎಸ್ ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮೋಹನ ರೆಡ್ಡಿ, ಮಾಲ್ತೇಶ್ ಹರೀಕೃಷ್ಣ ಮುಂತಾದವರು ಉಪಸ್ಥಿತರಿದ್ದರು.