ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 0545/2025 ಕಲಂ 331(3), 305, ಬಿ.ಎನ್.ಎಸ್ ರಲ್ಲಿ ದಿನಾಂಕ 17/9/2025 ರಂದು ಗೊಪಾಲ ಗೌಡ ಬಡಾವಣೆ ಸಿ ಬ್ಲಾಕ್ ನಲ್ಲಿ ಹಗಲು ಸಮಯದಲ್ಲಿ ಮನೆಗಳ್ಳತನ ನಡೆದಿದ್ದು ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಎ ಜಿ ಕಾರಿಯಪ್ಪ ಮತ್ತು ಶ್ರೀ ರಮೇಶ ಕುಮಾರ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಾಬು ಆಂಜನಪ್ಪ ರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿ.ಐ ಶ್ರೀ ಕೆ ಟಿ ಗುರುರಾಜ್  ಹಾಗೂ ಸಿಬ್ಬಂದಿಯವರಾದ ಹೆಚ್ ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಸಿಪಿಸಿ ಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ರಂಗನಾಥ್, ಹರೀಶ್ ಎಮ್.ಜಿ, ಮಪಿಸಿಗಳಾದ ಶ್ರೀಮತಿ ಅನುಷಾ ಮತ್ತು ಕು। ಚೈತ್ರಾ ರವರಗಳು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ಹೆಚ್.ಸಿ ಇಂದ್ರೇಶ, ಗುರು, ಮತ್ತು ವಿಜಯ ಹಾಗೂ ಚಾಲಕರಾದ ಎ.ಹೆಚ್.ಸಿ ಪುನೀತ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ಅಶ್ರಫ್ ವುಲ್ಲಾ, 35 ವರ್ಷ ,ಆಟೋ ಚಾಲಕ ವಾಸ ವಿಶ್ವೇಶ್ವರನಗರ, ಗೋಪಾಳ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1) 22,74,500/- ರೂ ನಗದು ಹಣ, 2) 130 ಗ್ರಾಂ ಬಂಗಾರದ ಆಭರಣ ಮೌಲ್ಯ 11,70,000/- ಮತ್ತು 3) 550 ಗ್ರಾಂ ಬೆಳ್ಳಿಯ ಆಭರಣಗ ಮೌಲ್ಯ 65,000/- ಸೇರಿ ಒಟ್ಟು 12,35,000/- ರೂ ನ ಬಂಗಾರ & ಬೆಳ್ಳಿಯ ಆಭರಣಗಳು ಹಾಗು 22,74,000/- ನಗದು ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹಾಲಿ ಆರೋಪಿ ನ್ಯಾಯಾಂಗ ಬಂದನಕ್ಕೆ ನೀಡಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *