
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರ ಕರೆಯ ಮೇರೆಗೆ ದೇಶದಾದ್ಯಂತ “ಸೇವಾ ಪಾಕ್ಷಿಕ” ಅಡಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.

ಈ ಸಮಯದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಯ ಭಾಗವಾಗಿ ಶಿವಮೊಗ್ಗ ಜಿಲ್ಲಾ ಯುವ ಮೋರ್ಚಾ ನಗರದ ರೋಟರಿ ಬ್ಲಡ್ ಬ್ಯಾಂಕ್ ನಲ್ಲಿ ಆಯೋಜಿಸಿದ್ದ “ರಕ್ತದಾನ ಶಿಬಿರ” ಕಾರ್ಯಕ್ರಮವನ್ನು ಸಂಸದ ಬಿ ವೈ ರಾಘವೇಂದ್ರ ಉದ್ಘಾಟಿಸಿದರು. ಇದೇ ಸಮಯದಲ್ಲಿ ರಕ್ತದಾನದಲ್ಲಿ ಪಾಲ್ಗೊಂಡ ರಕ್ತದಾನಿಗಳಿಗೆ ಅಭಿನಂದನಾ ಪತ್ರ ವಿತರಣೆ ಮಾಡಲಾಯಿತು.
ವಿಧಾನ ಪರಿಷತ್ ಶಾಸಕರುಗಳಾದ ಶ್ರೀ ಧನಂಜಯ ಸರ್ಜಿ ಅವರು ಹಾಗೂ ಶ್ರೀ ಅರುಣ್ ಅವರು, ಪ್ರಮುಖರಾದ ಶ್ರೀ ನಾಗರಾಜ್ ಅವರು, ಶ್ರೀ ದೀನ್ ದಯಾಳ್ ಅವರು, ಶ್ರೀ ರಾಹುಲ್ ಬಿದರೆ ಅವರು, ಶ್ರೀ ದರ್ಶನ್ ಅವರು ಹಾಗೂ ಅನೇಕರು ಜೊತೆಗಿದ್ದರು.