
ಶಿವಮೊಗ್ಗ ಭದ್ರಾ ಡ್ಯಾಮ್ ಗೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಅಧ್ಯಕ್ಷರಾದ ಡಾ ಕೆ ಪಿ ಅಂಶುಮಂತ್ ಭೇಟಿ ನೀಡಿ ಭದ್ರಾ ಡ್ಯಾಮ್ ನಲ್ಲಿ ಇತ್ತೀಚೆಗೆ ಪೂರ್ಣಗೊಂಡಿರುವ ಎಡದಂಡೆ ನಾಲೆಯ ಗೇಟ್ ರಿಪೇರಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ನಂತರ ಕಾಮಗಾರಿಯನ್ನು ಪೂರ್ಣಗೊಳಿಸಿದ ಅಧಿಕಾರಿ/ಸಿಬ್ಬಂದಿ/ಕಾರ್ಮಿಕರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಭದ್ರಾ ಕಾಡಾ ಆಡಳಿತಾಧಿಕಾರಿಗಳು ಸತೀಶ್ ಆರ್. ಭೂ ಅಭಿವೃದ್ದಿ ಅಧಿಕಾರಿ (ತಾಂತ್ರಿಕ) ಪ್ರಶಾಂತ್ ಕೆ ಅಧೀಕ್ಷಕ ಇಂಜಿನಿಯರ್ ಬಿ.ಆರ್. ಪ್ರಾಜೆಕ್ಟ್ ರವಿಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಮತ್ತು ಇನ್ನಿತರೆ ನೀರಾವರಿ ಅಧಿಕಾರಿಗಳು ಉಪಸ್ಥಿತರಿದ್ದರು.