
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಮಹಿಳಾ ಅಧ್ಯಕ್ಷರಾಗಿ ಶ್ವೇತಾ ಬಂಡಿ ಅಧಿಕಾರ ಸ್ವೀಕಾರ ಮಾಡಿದರು. ನಗರದ ಬಂಜಾರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮತ್ತು ಉಸ್ತುವಾರಿ ಸಚಿವರದ ಮಧು ಬಂಗಾರಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಅವರು ಶ್ವೇತಾ ಬಂಡಿರವರು ಸಾಕಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ ಪಕ್ಷಕ್ಕೆ ದುಡಿದಿದ್ದಾರೆ.ಪಕ್ಷ ಅವರ ಸೇವಾ ನಿಷ್ಠೆಯನ್ನು ಗುರುತಿಸಿ ಈ ದೊಡ್ಡ ಜವಾಬ್ದಾರಿ ನೀಡಿದೆ. ಅವರಿಗೆ ಪಕ್ಷದಿಂದ ಎಲ್ಲಾ ರೀತಿಯ ಸಹಕಾರ ಸಿಗುತ್ತದೆ ಎಂದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ವೇತಾ ಬಂಡಿ ಅವರು ಇದೊಂದು ಐತಿಹಾಸಿಕ ಕ್ಷಣ ತುಂಬಾ ಭದ್ರ ನದಿಗಳ ಶಕ್ತಿಯ ಹಾಗೆ ಮಹಿಳಾ ಶಕ್ತಿಯ ನಡುವೆ ನನ್ನ ಅಧಿಕಾರ ಸ್ವೀಕರಿಸಿದ್ದು ಅತ್ಯಂತ ಐತಿಹಾಸಿಕ ಕ್ಷಣ. ನಾನು ಇದೊಂದು ಅಧಿಕಾರ ಎಂದು ಭಾವಿಸುವುದಿಲ್ಲ. ಇದೊಂದು ಜವಾಬ್ದಾರಿ ಎಂದು ಭಾವಿಸುವೆ. ಏಕೆಂದರೆ ಧ್ವನಿ ಇಲ್ಲದ ಶೋಷಿತ ಮಹಿಳೆಯರ ಧ್ವನಿಯಾಗುವುದು ನನ್ನ ಉದ್ದೇಶ. ಇದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆ ಎಂದರು.
ದೇಶದಲ್ಲಿ ಮಹಿಳೆಯರು ದೊಡ್ಡ ಶಕ್ತಿ ಎಂದರೆ ಇಂದಿರಾಗಾಂಧಿಯವರು. ಅವರ ಸ್ಪೂರ್ತಿಯೇ ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಮಹಿಳಾ ಸಬಲೀಕರಣ ಎನ್ನುವುದು ಕೇವಲ ವಾಕ್ಯ ಆಗಬಾರದು. ಘೋಷಣೆ ಆಗಬಾರದು. ಅದು ಅವಳ ಬದುಕಿನ ಭಾಗವಾಗಿರಬೇಕು. ಇದು ಕುಟುಂಬದಿಂದ ಹಿಡಿದು ರಾಜಕಾರಣ ಅವರಿಗೆ ಕೂಡ ಇದು ಅನ್ವಯವಾಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.