ಆತ್ಮೀಯ ಸಮಾಜ ಬಾಂಧವರೇ,
ದಿನಾಂಕ 5-10-2025 ರ ಭಾನುವಾರ ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭಿಸಿ ಹದಿನೈದು ದಿನಗಳ ಕಾಲ ಶಿವಮೊಗ್ಗ ಬಂಟರ ಭವನದಲ್ಲಿ ಪ್ರತಿನಿತ್ಯ ಯೋಗಾಸನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದ ಪ್ರತಿಷ್ಠಿತ ಶ್ರೀ ಶಿವಗಂಗಾ ಯೋಗ ಕೇಂದ್ರದ ವತಿಯಿಂದ ರಾಷ್ಟ್ರಪ್ರಶಸ್ತಿ ವಿಜೇತ ಯೋಗಾಚಾರ್ಯರಾದ ಶ್ರೀ ಸಿ ವಿ ರುದ್ರಾರಾಧ್ಯ ಇವರು ಯೋಗ ಶಿಬಿರ ನಡೆಸಿಕೊಡಲಿದ್ದಾರೆ.
ಸಮಾಜ ಬಾಂಧವರು, ಗೋಪಾಲಗೌಡ ಬಡಾವಣೆ ಹಾಗೂ ಸುತ್ತಮುತ್ತಲಿನ ಬಡಾವಣೆಯ ನಿವಾಸಿಗಳು ಈ ಶಿಬಿರದ ಸದುಪಯೋಗ ಪಡೆಯಬೇಕಾಗಿ ಈ ಮೂಲಕ ಕೋರಲಾಗಿದೆ.
ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿ,
ಬಂಟರ ಯಾನೆ ನಾಡವರ ಸಂಘ, ಶಿವಮೊಗ್ಗ