DIVINE STAR ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಕಾಂತಾರ ಚಾಪ್ಟರ್ 1 ಪ್ರೇಕ್ಷಕರಿಂದ ಅದ್ದೂರಿ ರೆಸ್ಪಾನ್ಸ್…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ಕಾಂತರಾ ಚಾಪ್ಟರ್-1 ಸಿನಿಮಾವೂ ವಿಶ್ವಾದ್ಯಂತ ತೆರೆಗೆ ಬಂದಿದೆ.ಸಿನಿಮಾದಲ್ಲಿ ಕರಾವಳಿ ದೈವಗಳನ್ನ ಪರಿಚಯಿಸುವ ರಿಷಬ್ ಶೆಟ್ಟಿ ನಟನೆಗೆ ಪ್ರೇಕ್ಷಕ ಮಹಾಪ್ರಭುಗಳ ಬಹುಪರಾಗ್ ಎಂದಿದ್ದಾರೆ.ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ಮತ್ತು ಇಂಟರ್ ವೆಲ್ ನಂತರದ ಟ್ವಿಸ್ಟ್ ನಿಜಕ್ಕೂ ಪ್ರೇಕ್ಷಕನನ್ನ ಹಿಡಿದುಕೊಳ್ಳುವಲ್ಲಿ ಸಿನಿಮಾ ತಂಡ ಭರ್ಜರಿಯಾಗಿ ಯಶಸ್ವಿಯಾಗಿದೆ.
ಕಾಂತಾರ ಸಿನಿಮಾ-2 ಬಿಡುಗಡೆಯಾದಾಗ ಕಾಂತಾರ ಅಧ್ಯಾಯ 1 ಪ್ರೀಕ್ವೆಲ್ ಮಾಡ್ತೀವಿ ಎಂಬ ಕಲ್ಪನೆಯನ್ನು ಇಟ್ಟುಕೊಳ್ಳದೆ ಬಿಡುಗಡೆಯಾಗಿತ್ತು. ಸಿನಿಮಾದ ಯಶಸ್ವಿನ ನಂತರ ರಿಷಬ್ ಶೆಟ್ಟಿ ಫ್ರೀಕ್ವೆಲ್ ಮಾಡ್ತೀವಿ ಎಂದು ಹಾಗೂ ಕ್ರಿಸ್ತಶಕ 400 500 ಕಾಲಘಟ್ಟದ ಕಥೆ ಹೇಳ್ತೀವಿ ಎಂದು ಹೇಳಿದಾಗ ಸಿನಿಮಾ ಹೇಗಿರಬಹುದು ಎಂಬ ಕುತೂಹಲಕ್ಕೆ ಕಾರಣವಾಗಿತ್ತು.ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
ಕದಂಬರ ಕಾಲದ ಪ್ರೇಕ್ಷಕ 4 ನೇ, 5 ನೇ ಶತಮಾನದ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿ ಇಟ್ಟುಕೊಂಡ ರಿಶಬ್ ಶೆಟ್ಟಿ ಒಂದು ಮಾಯಾವಿ ಲೋಕವನ್ನು ಸೃಷ್ಟಿಸಿದ್ದಾರೆ. ಬಾಂಗ್ರರಾಜ ಮನೆತನ ಮತ್ತು ಈಶ್ವರ ಹೂದೋಟದ ಜನರ ನಡುವಿನ ಯುದ್ಧವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಈಶ್ವರ ಹೂದೋಟದ ಮುಂಚೂಣಿಯ ಯುವ ನಾಯಕ ಬೇರ್ಮೆ ಪಾತ್ರದಲ್ಲಿ ನಟ ರಿಷಬ್ ಕಾಣಿಸಿಕೊಂಡಿದ್ದಾರೆ. ಬಾಂಗ್ರ ಮನೆತನದ ಅರಸರಾಗಿ ಜೈರಾಮ್ (ರಾಜಶೇಖರ್) ಮತ್ತು ಗುಲ್ಶನ್ ದೇವಯ್ಯ (ಕುಲಶೇಖರ)ಕಾಣಿಸಿಕೊಂಡಿದ್ದಾರೆ ಇವರು ನಡುವಿನ ಸಮರದಲ್ಲಿ ದೈವದ ಪಾತ್ರವೇನು ದೈವಕ್ಕೂ ಹೂದೋಟಕ್ಕೂ ಯಾವ ನಂಟು ಎಂಬುದನ್ನು ತೆರೆಯ ಮೇಲೆ ಅದ್ಭುತ ಮೇಕಿಂಗ್ನೊಂದಿಗೆ ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರಕಥೆ ಹೆಣದಿದ್ದಾರೆ.
ಕಾಂತಾರ ಚಿತ್ರದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದ ನಟ ರಿಷಬ್ ಶೆಟ್ಟಿ ಈ ಬಾರಿಯೂ ತಮ್ಮ ನಟನ ವಿಶ್ವರೂಪವನ್ನು ತೆರೆದಿಟ್ಟಿದ್ದಾರೆ. ನಟನೆ ಜೊತೆಗೆ ಈ ಸಲ ಆಕ್ಷನ್ ಸೀನ್ಗಳಲ್ಲೂ ಭಯಂಕರವಾಗಿ ಮಿಂಚಿದ್ದಾರೆ. ಎಂದಿನಂತೆ ಕ್ಲೈಮ್ಯಾಕ್ಸ್ ನಲ್ಲಿ ಬೆರಗು ಮೂಡಿಸುವಂತಹ ನಟನೆ ಯೊಂದಿಗೆ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ಜೊತೆಗೆ ಹೀರೀಯಿನ್ ಆಗಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ್ ಪ್ರೇಕ್ಷಕರು ಅಚ್ಚರಿಗೆ ಕಾಣಿಸಿದ್ದಾರೆ. ಕೊನೆಯ 30 ನಿಮಿಷದಲ್ಲಿ ಟ್ವಿಸ್ಟ್ ನೊಂದಿಗೆ ಹೀರೋಯಿನ್ ವಿಲನ್ ಆಗಿ ಬದಲಾಗುವುದೇ ಕಥೆಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಹಾಸ್ಯ ನಟನೆಯಲ್ಲಿ ಪ್ರಕಾಶ್ ತುಮ್ಮಿ ನಾಡು ರಾಕೇಶ್ ಪೂಜಾರಿ ನವೀನ್ ಪಡಿಲ್ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಸಂಗೀತದ ವಿಷಯದಲ್ಲಿ ಅಜನೀಶ್ ಲೋಕನಾಥ್ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಕರ್ಮ ಹಾಗೂ ವರಾಹ ರೂಪಂ ಹಾಡು ಫ್ರಿಕ್ವೆಲ್ ನಲ್ಲಿ ಪುನರಾವರ್ತನೆಗೊಂಡಿದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಸಿನಿಮಾದಲ್ಲಿ 50-50 ಎನಿಸಿದರೂ ಮ್ಯಾಜಿಕ್ ಮಾಡುತ್ತದೆ. ಬಿಜಿಎಂಗೆ ಮತ್ತು ವಿಎಫ್ಎಕ್ಸ್ ಗೆ ಭರ್ಜರಿ ಒತ್ತು ನೀಡಲಾಗಿದೆ.
ಸಿನಿಮದಲ್ಲಿ ಭಾರಿ ಮೇಕಿಂಗ್ ಗೆ ಒತ್ತು ನೀಡಲಾಗಿದೆ. ಕಾಂತಾರ ಚಾಪ್ಟರ್-2 ರಲ್ಲಿ ಎಷ್ಟು ಬೇಕೋ ಅಷ್ಟು ಮೇಕಿಂಗ್ ಗೆ ಒತ್ತು ನೀಡಲಾಗಿತ್ತು. ಆದರೆ ಅಧ್ಯಾಯ-1 ರಲ್ಲಿ ಭಾರಿ ಮೇಕಿಂಗ್ ಗೆ ಒತ್ತು ನೀಡಲಾಗಿದೆ.ಛಾಯಾಗ್ರಹಕ ಅರವಿಂದ್ ಕಶ್ಯಪ್ ಕಲಾ ನಿರ್ದೇಶಕ ಧರಣಿ ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್, ಅರವಿಂದ್ ರ ಕ್ಯಾಮರಾ ಕಣ್ಣಲ್ಲಿ ಕಾಂತರಾ ಚಾಪ್ಟರ್ 1 ಸಿನಿಮಾ ಸೊಗಸಾಗಿ ಮೂಡಿ ಬಂದಿದೆ. ಕತ್ತಲು ಬೆಳಕಿನ ಆಟದಲ್ಲಿ ಅರವಿಂದ್ ಕಶ್ಯಪ್ ಗೆದ್ದಿದ್ದಾರೆ.
ಜೊತೆಗೆ ಕಲಾ ನಿರ್ದೇಶನ ಇಡೀ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಗಿದೆ ಊರಿನೊಳಗೆ ರಥ ಹರಿದು ಬರುವ ದೃಶ್ಯ ಕುದುರೆ ಒಂದು ಮದುವೆಯಲ್ಲಿ ಬೀದಿಯಲ್ಲಿ ಓಡಾಡುವ ದೃಶ್ಯ ಬ್ರಹ್ಮ ಕಳಸದ ದೃಶ್ಯಗಳ ಮೇಕಿಂಗ್ ಟಾಪ್ ಕ್ವಾಲಿಟಿಯಲ್ಲಿ ಕೂಡಿದೆ.ಕಾಂತರಾ ಎರಡು ಮತ್ತು ಫ್ರಿಕ್ವೆಲ್ ಸಿನಿಮಾಕ್ಕೆ ಪ್ರೇಕ್ಷಕ ತಾಳೆ ಹಾಕುವುದು ಸಹಜ ಆದರೆ ಎಲ್ಲೂ ಸಹ ಕಾಂತಾರಾ ಎರಡರೊಂದಿಗೆ ಈ ಸಿನಿಮಾ ಹೊಂದಿಕೊಳ್ಳದಿದ್ದರೂ ಕರಾವಳಿಯ ದೇವರಾದ ಗುಳಿಗ ಪಂಜುರ್ಲಿ ಶಿವಗಣ ಹಾಗೂ ಶಿವ ದೈವ ದೇವತೆಗಳನ್ನು ಹೇಗೆ ಬಿಂಬಿಸಬೇಕು ಅವುಗಳ ಪಾತ್ರದಲ್ಲಿ ರಿಷಬ್ ಅರೆದು ಕುಡಿದಿದ್ದಾರೆ.
ಕೆಲವೊಂದು ಸೀನುಗಳಲ್ಲಿ ಬಾಹುಬಲಿ ದೃಶ್ಯಗಳು ಸಹ ತಳಕು ಹಾಕುತ್ತವೆ. ಕ್ಲೈಮಾಕ್ಸ್ ಗೆ ಮುಂಚೆ ರಿಶಬ್ ಈಶ್ವರನಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ಜಾಳು ಹೀಡೀತ ಎನ್ನುವಷ್ಟರಲ್ಲಿ ಕ್ಲೈಮ್ಯಾಕ್ಸ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.ಒಟ್ಟಿನಲ್ಲಿ ಕಾಂತಾರ ಫ್ರೀಕ್ವೆಲ್ ಸಿನಿಮಾ ಭರ್ಜರಿಯಾಗಿ ಮೂಡಿ ಬಂದಿದ್ದು ಪ್ರೇಕ್ಷಕ ಮಹಾಪ್ರಭುಗಳ ಮನಸನ್ನು ಇಡೀ ಚಿತ್ರತಂಡ ಗೆದ್ದಿದೆ.