BUNTS TROPHY 2025…

ಶಿವಮೊಗ್ಗ ಬಂಟರ ವಾರ್ಷಿಕ ಅದ್ದೂರಿ ಕ್ರೀಡಾಕೂಟ 2025 ಅದ್ದೂರಿಯಾಗಿ ನಡೆಯಿತು.ನಗರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಕ್ರೀಡಾಕೂಟವನ್ನು ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉದ್ಘಾಟಿಸಿದರು.ಈ ಸಮಯದಲ್ಲಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಖಜಾಂಚಿ ಸುರೇಶ್ ಶೆಟ್ಟಿ ಸಹ ಕಾರ್ಯದರ್ಶಿ ರಾಜೀವ್ ಶೆಟ್ಟಿ ಸಂಘಟನಾ ಕಾರ್ಯದರ್ಶ ಮಹೇಶ್ ಶೆಟ್ಟಿ ನಿರ್ದೇಶಕರಾದ ದಿವಾಕರ್ ಶೆಟ್ಟಿ ಅರುಣ್ ಶೆಟ್ಟಿ ಉದಯ್ ಶೆಟ್ಟಿ ಮಂಜುನಾಥ್ ಶೆಟ್ಟಿ ಮಹಿಳಾ ಅಧ್ಯಕ್ಷರಾದ ಪುಷ್ಪ ಶೆಟ್ಟಿ ಕಿಲಕ ಶೆಟ್ಟಿ ಪ್ರಭಾವತಿ ಶೆಟ್ಟಿ ವಾತ್ಸಲ್ಯ ಶೆಟ್ಟಿ ಶೃತಿ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಸಂಜೀವ್ ಕುಮಾರ್ ಮತ್ತು ಆದಿಚುಂಚನಗಿರಿ ಕಾಲೇಜಿನ ಪ್ರಾಂಶುಪಾಲರದ ಗುರುರಾಜ್ ರವರು ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಕ್ರಿಕೆಟ್ ವಾಲಿಬಾಲ್ ಶಟ್ ಫೂಟ್ ರನ್ನಿಂಗ್ ಕಪಲ್ ಗೇಮ್ ಮುಂತಾದ ವಿಶೇಷ ಕ್ರೀಡೆಗಳು ನಡೆದವು.

ಕ್ರಿಕೆಟ್ ತಂಡದಲ್ಲಿ ವಿನ್ನರ್ ಆಗಿ ಸುರೇಶ್ ಶೆಟ್ಟಿ(MSIL) ತಂಡ BUNTS TROPHY 2025 ಪ್ರಶಸ್ತಿ ಪಡೆದರು. ಇನ್ನು ರನ್ನರ್ ಅಪ್ ಆಗಿ ಸುರೇಶ್ ಶೆಟ್ಟಿ (ಕಾರ್ಯದರ್ಶಿ) ತಂಡ ಜಯಗಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.

ಮಂಜುನಾಥ್ ಶೆಟ್ಟಿ

Leave a Reply

Your email address will not be published. Required fields are marked *